ಮಡಿಕೇರಿ ಜು.19 : ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಜುಲೈ ಮಾಹೆಯಲ್ಲಿ “ಪ್ಲಾಸ್ಟಿಕ್ ಮುಕ್ತ ಅಭಿಯಾನ” ಕೈಗೊಂಡಿದ್ದು, ನಗರದಲ್ಲಿ ಈಗಾಗಲೇ ಏಕ ಬಳಕೆ ಪ್ಲಾಸ್ಟಿಕ್ ಅನ್ನು ನಿರ್ಬಂಧಿಸಿದ್ದು, ನಗರಸಭೆ ವತಿಯಿಂದ ಆಗ್ಗಿಂದಾಗೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್‍ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಗುತ್ತಿದೆ. ಈ ಕಾರ್ಯವನ್ನು ನಗರಸಭೆಯು ಮುಂದುವೆರೆಸಲಿದ್ದು, ಸಾರ್ವಜನಿಕರು ಹಾಗೂ ಉದ್ದಿಮೆದಾರರು ಸಹಕರಿಸಲು ಕೋರಿದೆ.
ಸರ್ಕಾರದ ಆದೇಶದಂತೆ ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿಗಳ ಅಕ್ರಮ ಮಾರಾಟ, ದಾಸ್ತಾನು ಸಂಗ್ರಹಣೆ ಹಾಗೂ ಬಳಕೆ ಕುರಿತಂತೆ ದಂಡಗಳನ್ನು ವಿಧಿಸಲಾಗುವುದೆಂದು ಈ ಮೂಲಕ ತಿಳಿಯಪಡಿಸಿದೆ.
ನಿಷೇಧಿತ ಪ್ಲಾಸ್ಟಿಕ್ ಸಾಮಾಗ್ರಿಗಳ ಮಾರಾಟಕ್ಕೆ ಮೊದಲನೇ ಅಪರಾಧಕ್ಕೆ ದಂಡ ರೂ.500, 2ನೇ ಅಪರಾಧಕ್ಕೆ ದಂಡ ರೂ.1,000, ನಿಷೇಧಿತ ಪ್ಲಾಸ್ಟಿಕ್ ಸಾಮಾಗ್ರಿಗಳ ಅಕ್ರಮ ದಾಸ್ತಾನು 1 ಕೆ.ಜಿ. ಮೊದಲನೇ ಅಪರಾಧಕ್ಕೆ ರೂ.500, ಎರಡನೇ ಅಪರಾಧಕ್ಕೆ 1000, 1 ರಿಂದ 10 ಕೆ.ಜಿ.ವರೆಗೆ ಮೊದಲನೆ ಅಪರಾಧಕ್ಕೆ ರೂ.2 ಸಾವಿರ, ಎರಡನೇ ಅಪರಾಧಕ್ಕೆ ರೂ.5 ಸಾವಿರ, 10 ರಿಂದ 50 ಕೆ.ಜಿ.ವರೆಗೆ ಮೊದಲನೇ ಅಪರಾಧಕ್ಕೆ ರೂ.5 ಸಾವಿರ, ಎರಡನೇ ಅಪರಾಧಕ್ಕೆ ರೂ.10 ಸಾವಿರ, 50 ರಿಂದ 100 ಕೆ.ಜಿ.ವರೆಗೆ ಮೊದಲನೇ ಅಪರಾಧಕ್ಕೆ ರೂ.10 ಸಾವಿರ, ಎರಡನೇ ಅಪರಾಧಕ್ಕೆ ರೂ.20 ಸಾವಿರ, 100 ಕೆ.ಜಿ.ಗೆ ಮೊದಲನೇ ಅಪರಾಧ ರೂ.40 ಸಾವಿರ, ಎರಡನೇ ಅಪರಾಧಕ್ಕೆ ರೂ.50 ಸಾವಿರ, ಮೂರನೇ ಅಪರಾಧಕ್ಕೆ ಉದ್ದಿಮೆ ಪರವಾನಗಿಯನ್ನು ರದ್ದುಗೊಳಿಸುವುದು ಹಾಗೂ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ನಿಷೇಧಿತ ಪ್ಲಾಸ್ಟಿಕ್ ಸಾಮಾಗ್ರಿಗಳ ಅಕ್ರಮ ಬಳಕೆಗೆ ಮೊದಲನೇ ಅಪರಾಧಕ್ಕೆ ರೂ.20, 2ನೇ ಅಪರಾಧಕ್ಕೆ ರೂ.50, 3ನೇ ಅಪರಾಧಕ್ಕೆ ರೂ.75 ದಂಡ ವಿಧಿಸಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ವಿಜಯ ತಿಳಿಸಿದ್ದಾರೆ.









