ಮಡಿಕೇರಿ ಜು.20 : ನಗರದ ವಿದ್ಯಾನಗರದಲ್ಲಿರುವ ನೂತನ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ‘ಉಪಾಹಾರ ಗೃಹ’ವನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ ನಡೆಸಲು ಮರು ಟೆಂಡರ್/ಕೊಟೇಷನ್ ಆಹ್ವಾನಿಸಲಾಗಿದೆ.
ಮರು ಟೆಂಡರ್/ಕೊಟೇಷನ್ ಸಲ್ಲಿಸಲು ಆ.2 ರ ಸಂಜೆ 6 ಗಂಟೆ ವರೆಗೆ ಕಾಲಾವಕಾಶವಿದೆ. ಮುಚ್ಚಿದ ಲಕೋಟೆಗಳನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು, ಮಡಿಕೇರಿ ಇವರ ಸಮ್ಮುಖದಲ್ಲಿ ಆ.7 ರಂದು ಸಂಜೆ 6 ಗಂಟೆಗೆ ತೆರೆಯಲಾಗುತ್ತದೆ. ಷರತ್ತು ಹಾಗೂ ನಿಬಂಧನೆಗಳ ಬಗ್ಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರ ಕಚೇರಿಯಲ್ಲಿ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.









