ಮಡಿಕೇರಿ ಜು.22 : ಆಟೋ ಅಪಘಾತಕ್ಕೊಳಗಾಗಿ ಕೋಮಾವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಯ ವೈದ್ಯಕೀಯ ಚಿಕಿತ್ಸೆಗೆ ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕದಿಂದ ಆರ್ಥಿಕ ನೆರವು ನೀಡಲಾಯಿತು.
ಕೆಲವು ದಿನಗಳ ಹಿಂದೆ ಆಟೋ ಅಪಘಾತಕ್ಕೊಳಗಾಗಿ ಇದೀಗ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಂಟನೇ ತರಗತಿ ವಿದ್ಯಾರ್ಥಿ ಭುವಿನ್ ವೈದ್ಯಕೀಯ ಚಿಕಿತ್ಸೆಗೆ ಕೊಡಗು ಜಿಲ್ಲೆ ಅಲ್ಲದೆ ದಕ್ಷಿಣ ಕನ್ನಡ ,ಮೈಸೂರು ಜಿಲ್ಲೆ ಹಾಗೂ ಹೊರದೇಶಗಳಿಂದಲೂ ದಾನಿಗಳಿಂದ ಸಹಾಯಧನ ರೂಪದಲ್ಲಿ ಬಂದ ರೂ.51,701 ರೂಪಾಯಿಗಳನ್ನು ವಿದ್ಯಾರ್ಥಿಯ ತಂದೆ ಸುನಿಲ್ ಅವರಿಗೆ ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕ ಪದಾಧಿಕಾರಿಗಳು ಹಸ್ತಾಂತರಿಸಿದರು.
ಈ ಸಂದರ್ಭ ಸದಸ್ಯರಾದ ಸುರೇಶ್, ಶಶಿ, ಚಂದ್ರಶೇಖರ್, ಪವನ್, ಅರುಣ್, ಜಯಪ್ರಕಾಶ್, ರಾಜೇಶ್,(ವಿಜು)ಪನ್ನೇ, ರಾಜುಮಣಿ, ರಾಮಚಂದ್ರ, ವಿನು ಹಾಜರಿದ್ದರು.
ಸುಮಾರು ನಾಲ್ಕು ತಿಂಗಳ ಹಿಂದೆ ಪ್ರಾರಂಭಗೊಂಡ ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕವು ಹಲವು ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದು, ಜಿಲ್ಲೆಯ ಕುಲಾಲ ಕುಂಬಾರ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದರು.