ಮಡಿಕೇರಿ ಜು.24 : ಕುಂಜಿಲ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 10ನೇ ವರ್ಷದ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಯಿತು.
ಕ್ರೀಡಾಕೂಟದಲ್ಲಿ ಸುಮಾರು 38 ತಂಡಗಳು ಭಾಗವಹಿಸಿದ್ದು, ಕೌ-ಟೈಗರ್ ತಂಡ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದು, ನಿಹಾ ಫ್ರಂಡ್ಸ್ ಕುಂಜಿಲ ತಂಡ ದ್ವಿತೀಯ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡಿತು.
ನಾಪೋಕ್ಲು ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಮಂಜುನಾಥ್ ಕ್ರೀಡಾಕೂಟದಲ್ಲಿ ಸೋಲ, ಗೆಲುವು ಮುಖ್ಯವಲ್ಲ. ದೈಹಿಕ ಸಾಮರ್ಥ್ಯದ ವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭ ಕಕ್ಕಬ್ಬೆ ಗ್ರಾ.ಪಂ ಅಧ್ಯಕ್ಷ ಕಲಿಯಂಡ ಸಂಪ, ಸೌಕತ್ ಮಕ್ಕಿ, ಬಶೀರ್ ಪೊಯಕರೆ, ರಶೀದ್ ವಯಕೋಲ್ ಹಾಗೂ ಹಲವಾರು ಗಣ್ಯ ವ್ಯಕ್ತಿಗಳು ಪಾಲ್ಗೊಂಡಿದ್ದರು.
ವರದಿ:ಸಾಜಿದ್ ಪಯ್ಯಡಿ