ಸುಂಟಿಕೊಪ್ಪ ಜು.24: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸುಂಟಿಕೊಪ್ಪದ ವಿವಿಧೆಡೆ ಹಾನಿಯಾಗಿದೆ.
ಕಳೆದ 3 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆಯ ಹಿನ್ನಲೆಯಲ್ಲಿ ಸ್ವಸ್ಥಶಾಲೆ ಸಮೀಪದಲ್ಲಿ ಟಿಸಿಎಲ್ ತೋಟದ ಮರ ಮುತ್ತ ಎಂಬುವವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಮನೆಗೋಡೆಗೆ ಹಾನಿಯಾಗಿದ್ದು, ನಷ್ಟವುಂಟಾಗಿದೆ. ಅದೃಷ್ಟವಶತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಪಂಚಾಯಿತಿ ಉಪಾಧ್ಯಕ್ಷ ಕೆ.ಕೆ.ಪ್ರಸಾದ್ ಕುಟ್ಟಪ್ಪ, ಸದಸ್ಯ ಆಲಿಕುಟ್ಟಿ, ಗ್ರಾಮಲೆಕ್ಕಿಗರಾದ ನಾಗೇಂದ್ರ ಭೇಟಿ ನೀಡಿ ಪರಿಶೀಲಿಸಿ ಬಿದ್ದ ಮರವನ್ನು ತೆರವುಗೊಳಿಸಿದರು.
ಸುಂಟಿಕೊಪ್ಪ ಪಂಪ್‍ಹೌಸ್ ಬಡಾವಣೆಯ ನಿವಾಸಿ ಜಯಮ್ಮ ಎಂಬವವರ ಮನೆಯ ಗೋಡೆಯು ಕುಸಿದು ಬಿದಿದ್ದು, ಸಾವಿರಾರು ರೂ ನಷ್ಟವುಂಟಾಗಿದೆ. ಅದೃಷ್ಟವಶತ್ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಪಂಚಾಯಿತಿ ಅಧ್ಯಕ್ಷೆ ಸದಸ್ಯರುಗಳು, ಗ್ರಾಮಲೆಕ್ಕಿಗರಾದ ನಾಗೇಂದ್ರ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿವಿಧೆಡೆ ಗಾಳಿಮಳೆಗೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದೆ.









