ಕಡಂಗ ಜು.25 : ಅರಪಟ್ಟು ಪೋದವಾಡ ಗ್ರಾಮದ ಕೋಡಿರ ಕುಟುಂಬಸ್ಥರಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು.
ಕೋಡಿರ ಐನ್ ಮನೆಯಲ್ಲಿ ಕುಟುಂಬದ ಮಹಿಳಾ ಒಕ್ಕೂಟ ಹಿರಿಯರಾದ ಮುತ್ತವ್ವ ಪೊನ್ನಪ್ಪ , ಸರಸ್ವತಿ , ಅಧ್ಯಕ್ಷೆ ಪೊನ್ನು ಮಂದಣ್ಣ, ಉಪಾಧ್ಯಕ್ಷೆ ಹೇಮಾ ಮಂದಣ್ಣ ಹಾಗೂ ಕುಟುಂಬದ ಅಧ್ಯಕ್ಷರಾದ ಪ್ರವೀಣ್ ಚಂಗಪ್ಪ ಅವರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಣಿ ಮಾಚಯ್ಯ, ಪ್ರತಿಯೊಂದು ಕುಟುಂಬದಲ್ಲಿ ಒಗ್ಗಟ್ಟು ಬಹಳ ಮುಖ್ಯ ಹಾಗೂ ಒಗ್ಗಟ್ಟಿದ್ದರೆ ಏನನ್ನು ಸಾಧಿಸಬಹುದು ಎಂದು ನುಡಿದರು.
ಕುಟುಂಬದ ಅನೇಕ ಹಿರಿಯ ಕಿರಿಯ ಕಲಾವಿದರಿಂದ ಹಾಡುಗಾರಿಕೆ ನಡೆಯಿತು.
ವಿಶೇಷವಾಗಿ ಕೊಡಗಿನ ಹೆಸರಾಂತ ಕಲಾವಿದೆ ಲಲಿತಾ ಅವರ ಹಾಡುಗಳು ಗಮನ ಸೆಳೆಯಿತು. ಶಿಲ್ಪಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಟೀನಾಹರ್ಷಸ್ವಾಗತಿಸಿದರು ಹಾಗೂ ವೀಣಾಶಶಿ ವಂದಿಸಿದರು.
ವರದಿ : ನೌಫಲ್ ಕಡಂಗ








