ಮಡಿಕೇರಿ ಜು.25 : ಭಾಗಮಂಡಲ ಹೋಬಳಿ ಬೇಂಗೂರು ಚೇರಂಬಾಣೆ ವ್ಯಾಪ್ತಿಯ ದೋಣಿ ಕಡ್ ಎಂಬಲ್ಲಿ ಮಳೆಯಿಂದಾಗಿ ರಸ್ತೆಯು ಜಲಾವೃತವಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಫೈಬರ್ ದೋಣಿಯನ್ನು ವ್ಯವಸ್ಥೆ ಕಲ್ಪಿಸಲಾಗಿದೆ.
ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರರ ನಿರ್ದೇಶನದಂತೆ ಅಗ್ನಿಶಾಮಕ ಠಾಣಾಧಿಕಾರಿ ಜಿಲ್ಲಾ ಅಗ್ನಿಶಾಮಕ ಘಟಕದ ಸಹಕಾರದೊಂದಿಗೆ ಫೈಬರ್ ದೋಣಿಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.