ಸೋಮವಾರಪೇಟೆ ಜು.25 : ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಸೋಮವಾರಪೇಟೆಯ ಸಾಕ್ಷಿ ಸಭಾಂಗಣದಲ್ಲಿ ನೂತನ ಸಾಲಿನ ಅಧ್ಯಕ್ಷೆ ಸಂಧ್ಯಾ ಕೃಷ್ಣಪ್ಪ ಹಾಗೂ ಕಾರ್ಯದರ್ಶಿ ತನ್ಮಯಿ ಪ್ರವೀಣ್, ನಿಕಟಪೂರ್ವ ಜಿಲ್ಲಾ ಪ್ರಾಂತಪಾಲಕರಾದ ಡಾ. ಸಾರಿಕ ಪ್ರಸಾದ್ ಪ್ರಮಾಣವಚನ ಬೋಧಿಸಿದರು.
ಪ್ರಪಂಚದಲ್ಲಿ ಅತಿ ದೊಡ್ಡ ಮಹಿಳಾ ಸಂಘಟನೆಯಾಗಿ ಇನ್ನರ್ ವೀಲ್ ಗುರುತಿಸಿಕೊಂಡಿದ್ದು, ಸೇವೆ ಮಾಡುವ ಮನಸ್ಸು ಇರುವವರು ಎಲ್ಲರೂ ಇದರಲ್ಲಿ ಸದಸ್ಯತ್ವ ಪಡೆಯಲು ಅವಕಾಶ ಇದೆ ಎಂದರು.
ಅಧ್ಯಕ್ಷೆ ಸಂಧ್ಯಾ ಕೃಷ್ಣಪ್ಪ ಮಾತನಾಡಿ, ಮಹಿಳೆಯರ ಸಂಘಟನೆ, ಸೇವಾ ಮನೋಭಾವ ಮತ್ತು ಅವರಲ್ಲಿನ ಪ್ರತಿಭೆ ಗುರುತಿಸಿ ಅವುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಕೆಲಸ ಇನ್ನರ್ ವೀಲ್ ಕ್ಲಬ್ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರಕ್ತದಾನ ಮತ್ತು ನೇತ್ರದಾನ ನೋಂದಣಿಯಂತಹ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಸಂಪಾದಕಿ ಉಮಾ ಮಹೇಶ್, ಮಾಜಿ ಅಧ್ಯಕ್ಷೆ ಪ್ರೇಮ ಹೃಷಿಕೇಶ್ ಇದ್ದರು.
ಇದೇ ಸಂದರ್ಭ ನೂತನ ಸಾಲಿನ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಸಂಗೀತಾ ದಿನೇಶ್, ಸಹ ಕಾರ್ಯದರ್ಶಿ ನಂದಿನಿ ಗೋಪಾಲ್, ಖಜಾಂಚಿ ಅಮ್ರಿತಾ ಕಿರಣ್, ಬುಲೇಟಿನ್ ಸಂಪಾದಕಿ ಸುವಿನಾ ಕೃಪಾಲ್ ಪದಾಧಿಕಾರಿಯಾಗಿ ರಾಜೇಶ್ವರಿ ಕವಿತಾ, ಜ್ಞಾನೇಶ್ವರಿ, ಚಿತ್ರಾ ಬೋಜರಾಜ್, ರಾಣಿ ಶ್ಯಾಮ್ ಅಧಿಕಾರ ಸ್ವೀಕರಿಸಿದರು.








