ಕಡಂಗ ಜು.25 : ಸಿದ್ದಾಪುರ ವರಕ್ಕಲ್ ಸಮಸ್ತ ಭವನದಲ್ಲಿ ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಡೆದ ಮುಹರಂ ಸಂಗಮ ಹಾಗೂ ಹಿಜರಿಯ ಸಂದೇಶ ಕಾರ್ಯಕ್ರಮದಲ್ಲಿ ನೂತನ ಎಸ್ ವೈ ಎಸ್ ಆಮಿಲ ಕೊಡಗು ಜಿಲ್ಲಾ ಸಮಿತಿಯನ್ನು ರಚಿಸಲಾಯಿತು.
ಒಟ್ಟು 70 ಸದಸ್ಯರನ್ನು ಒಳಗೊಂಡ ಆಮಿಲ ಸಮಿತಿಗೆ 21 ಕಾರ್ಯನಿರ್ವಾಹಕ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನ ಅಧ್ಯಕ್ಷರಾಗಿ ಹಾರಿಸ್ , ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ , ಜಿಲ್ಲಾ ವೀಕ್ಷಕರಾಗಿ ಮುಹಮ್ಮದ್ ಹಾಜಿ, ಕೋಶಾಧಿಕಾರಿಯಾಗಿ ಫ್ಯಾಶನ್ ಅಬ್ದುಲ್ ರಹ್ಮಾನ್ , ಉಪಾಧ್ಯಕ್ಷರುಗಳಾಗಿ ಅಬ್ದುಲ್ ರಹ್ಮಾನ್ ಕೊಡ್ಲಿಪೇಟೆ, ಸಯ್ಯದ್ ಸಲಾಂ ತಂಙಳ್ , ಸಹ ಕಾರ್ಯದರ್ಶಿಗಳಾಗಿ ರಝಾಕ್ , ಹನೀಫ್ ನೇಮಕಗೊಂಡರು.
ಸದಸ್ಯರುಗಳಾಗಿ ಎಂ.ಸಿ.ಅಶ್ರಫ್ ಮೌಲವಿ, ಹಾಫಿಳ್ ಹಾರಿಸ್ ಮುಸ್ಲಿಯಾರ್ , ಮುಹಮ್ಮದ್ ಅಝ್ಹರಿ, ಸುಲೈಮಾನ್ ಸಿದ್ದಾಪುರ, ರಶೀದ್ , ಶರೀಫ್ ಶನಿವಾರಸಂತೆ, ಮಸೂದ್ ಸಿದ್ದಾಪುರ, ಜಂಶೀದ್ ಕಲ್ಲುಬಾಣೆ, ಅಶ್ರಫ್ , ಇಬ್ರಾಹಿಂ , ಸ್ವಾದಿಕ್ , ಸಲಾಂ ಹಾಗೂ ತ್ವಾಹಾ ಅವರನ್ನು ಆಯ್ಕೆ ಮಾಡಲಾಯಿತು.
ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ಅಧ್ಯಕ್ಷರು ಹಾಗೂ ಕೇಂದ್ರ ಮುಶಾವರ ಸದಸ್ಯ ಎಂ.ಎಂ.ಅಬ್ದುಲ್ಲಾ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿ, ನೂತನ ಆಮಿಲ ಸಮಿತಿಯನ್ನು ಅಂಗೀಕರಿಸಿ ಘೋಷಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವೈ.ಅಶ್ರಫ್ ಫೈಝಿ ವಿಷಯ ಮಂಡನೆ ನಡೆಸಿ , ಉಸ್ಮಾನ್ ಫೈಝಿ ಉಸ್ತಾದರು ಪ್ರಾಸ್ತಾವಿಕ ಭಾಷಣ ಮಾಡಿದರು.
ಜಿಲ್ಲಾ ಎಸ್‍ವೈಎಸ್ ಅಧ್ಯಕ್ಷ ಸಿ.ಪಿ.ಎಂ ಬಷೀರ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕೋಶಾಧಿಕಾರಿಗಳಾದ ವೈ.ಎಂ.ಉಮರ್ ಫೈಝಿ ಸ್ವಾಗತಿಸಿದರು. ಎಸ್ ವೈ ಎಸ್ ಜಿಲ್ಲಾ ಸಮಿತಿ, ಆಮಿಲ ಜಿಲ್ಲಾ ಸಮಿತಿಯ ಸರ್ವ ಸದಸ್ಯರು ಹಾಗೂ ಜಿಲ್ಲೆಯ ಶಾಖಾ ಸಮಿತಿಯ ಆಯ್ದ ಪ್ರತಿನಿಧಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯದಿನಾಚರಣೆಯ ಪ್ರಯುಕ್ತ ಕೊಡಗು ಜಿಲ್ಲಾ ಎಸ್ ವೈ ಎಸ್ ಸಮಿತಿಯ ನೇತೃತ್ವದಲ್ಲಿ ನೆಲ್ಯಾ ಹುದಿಕೇರಿ ಶಾದಿ ಮಹಲ್ ನಲ್ಲಿ ಆ.15ರಂದು ನಡೆಯಲಿರುವ ರಾಷ್ಟ್ರ ರಕ್ಷಾ ಸಂಗಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ನಂತರ ಎಸ್ ವೈ ಎಸ್ ಆಮಿಲ ಕೊಡಗು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿರಾಜಪೇಟೆಯಲ್ಲಿ ಆಯೋಜಿಸಿದ ಬೃಹತ್ ರಕ್ತದಾನ ಶಿಬಿರದ ಯಶಸ್ಸಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ವರದಿ : ನೌಫಲ್ ಕಡಂಗ