ಮಡಿಕೇರಿ ಜು.27 : ಶಿಕ್ಷಣ ಸಚಿವಾಲಯ ಮತ್ತು ಕೇಂದ್ರೀಯ ವಿದ್ಯಾಲಯ ಸಂಘಟನೆ, ನವದೆಹಲಿಯಿಂದ ಸ್ವೀಕರಿಸಿದ ಆದೇಶದ ಪ್ರಕಾರ, ಕೇಂದ್ರೀಯ ವಿದ್ಯಾಲಯ ಕೊಡಗು ಎನ್‍ಇಪಿ 2020ರ 3ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎನ್‍ಇಪಿ 2020 ಉಪಕ್ರಮಗಳು, ಉತ್ತಮ ಅಭ್ಯಾಸಗಳನ್ನು ಎನ್‍ಇಪಿ 2020 ಅನುಷ್ಠಾನದ
ಸಾಧನೆಗಳನ್ನು ಪ್ರಸಾರ ಮಾಡಲು ಕೊಡಗು ಕೇಂದ್ರೀಯ ವಿದ್ಯಾಲಯದ ಆವರಣದಲ್ಲಿ ಜು.28 ರಂದು ಬೆಳಗ್ಗೆ 11 ಗಂಟೆಗೆ ಮಾಹಿತಿ ನೀಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲೆಯ ಸರ್ಕಾರಿ/ ಖಾಸಗಿ/ ಅನುದಾನಿತ ಶಾಲೆಗಳ ಸಂಸ್ಥೆಯ ಪ್ರಾಂಶುಪಾಲರು/ ಮುಖ್ಯಸ್ಥರು, ಆಯಾಯ ಶಾಲೆಗಳ 2 ಶಿಕ್ಷಕರು ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.









