ಮಡಿಕೇರಿ ಜು.29 : ಭಾರಿ ಗಾಳಿ ಮಳೆಯಿಂದ ಬೃಹತ್ ಮರ ಬಿದ್ದು ಹಾನಿಗೊಳಗಾಗಿದ್ದ ಹಾತೂರು ಗ್ರಾ.ಪಂ ವ್ಯಾಪ್ತಿಯ ಕೊಳತೋಡು ಬೈಗೊಡು ಗ್ರಾಮದ ನಿವಾಸಿ ಮುಕ್ಕಟಿರ ಶೋಭಾ ಎಂಬವರ ಮನೆಯನ್ನು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಪರಿಶೀಲಿಸಿದರು.
ನಂತರ ಕುಟುಂಬಸ್ಥರೊಂದಿಗೆ ಮಾಹಿತಿ ಪಡೆದು ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಗ್ರಾ.ಪಂ ಚುನಾಯಿತ ಜನಪ್ರತಿನಿಧಿಗಳು, ಪಕ್ಷದ ಕಾಯ೯ಕತ೯ರು ಹಾಜರಿದ್ದರು.








