ಮಡಿಕೇರಿ ಜು.28 : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಶೈಕ್ಷಣಿಕ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜು.30 ರಂದು ನಗರದ ಪತ್ರಿಕಾ ಭವನದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಚಾಲಕ ಹೆಚ್.ಜೆ. ರಾಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂದು ಬೆಳಿಗ್ಗೆ 10.30ಕ್ಕೆ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಗಾರರಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಪಾಧ್ಯಾಪಕಿ, ಸಾಹಿತಿಯೂ ಆಗಿರುವ ಡಾ. ಕವಿತಾ ರೈ ಪಾಲ್ಗೊಳ್ಳಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ,
ಸಮಾಜ ಸೇವಕ ಟಿ.ಆರ್. ವಾಸುದೇವ್, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಜೈರುಸ್ ಥೋಮಸ್ ಅಲೆಗ್ಸಾಂಡರ್ ಭಾಗವಹಿಸಲಿದ್ದಾರೆ.
ಗೋಣಿಕೊಪ್ಪದ ಪತ್ರಿಕಾ ಏಜೆಂಟ್ ನಂಗಾರು ಜಮುನಾ ವಸಂತ್ ಹಾಗೂ ಸೋಮವಾರಪೇಟೆಯ ಬಿ.ಪಿ. ಶಿವಕುಮಾರ್ ಅವರನ್ನು ಪತ್ರಿಕಾ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಗುವುದು.
ಪ್ರತಿಭಾ ಪುರಸ್ಕಾರದಡಿ ಬಾಚರಣಿಯಂಡ ಅನುಕಾರ್ಯಪ್ಪ ಅವರ ಪುತ್ರಿ ಪರಿಧಿ ಪೊನ್ನಮ್ಮ, ರಫೀಕ್ ಅಹ್ಮದ್ ಅವರ ಪುತ್ರಿ ರಿದಾಸುಮನ್, ಅನೀಶ್ ಮಾದಪ್ಪ ಅವರ ಪುತ್ರರಾದ ಆಕಾಶ್ ಚಿಟ್ಟಿಯಪ್ಪ, ಆಯುಷ್ ಕುಟ್ಟಪ್ಪ, ಬೊಳ್ಳಜಿರ ಅಯ್ಯಪ್ಪ ಅವರ ಪುತ್ರಿ ದೇಚಮ್ಮ ಅಯ್ಯಪ್ಪ, ಸಣ್ಣುವಂಡ ಕಿಶೋರ್ ನಾಚಪ್ಪ ಅವರ ಪುತ್ರಿ ಎಸ್.ಕೆ. ತ್ರಿಶಾ ಪೊನ್ನಮ್ಮ, ರಜಿತಾ ಕಾರ್ಯಪ್ಪ ಅವರ ಪುತ್ರಿ ಕೆ. ಈಶಾನ್ವಿ, ರಂಗಸ್ವಾಮಿ ಅವರ ಪುತ್ರ ಆರ್. ಸಮರ್ಥ್, ಕುಡೆಕ್ಕಲ್ ಗಣೇಶ್ ಅವರ ಪುತ್ರಿ ಕೆ.ಜಿ. ಶಿವಾನಿ, ಕೆ.ಎಸ್. ನಾಗೇಶ್ ಅವರ ಪುತ್ರಿ ಎನ್. ಸಾಗಾರಿಕ, ಸುನಿಲ್ ಪೊನ್ನೇಟಿ ಅವರ ಪುತ್ರಿ ತಿಷ್ಯಾ ಪೊನ್ನೇಟಿ, ಪಳೆಯಂಡ ಪಾರ್ಥ ಚಿಣ್ಣಪ್ಪ ಅವರ ಪುತ್ರಿ ಕಾಜಲ್ ಪಿ.ಸಿ., ಯಶೋದ ಅವರ ಪುತ್ರ ಹೇಮಂತ್ ಎಂ.ಎಂ, ಆನಂದ್ ಕೊಡಗು ಅವರ ಪುತ್ರಿ ಇಂಚರ, ಪುತ್ರ ರೋಶನ್, ರವಿ ಎಸ್. ಅವರ ಪುತ್ರಿ ಸಂಸ್ಕೃತಿ, ಸುನಿಲ್ ಕುಯ್ಯಮುಡಿ ಅವರ ಪುತ್ರಿಯರಾದ ಲಕ್ಷಿತಾ, ನಿರ್ಮಿತ, ಪುತ್ರ ನಿವೇದ್ ಬಾಲಾಜಿ, ಶಿವರಾಜು ಅವರ ಪುತ್ರಿ ಕೆ.ಎಸ್. ದೀಕ್ಷಾ, ಅನನ್ಯ ಕೆ.ಎಸ್, ವಾಸು ಅವರ ಪುತ್ರಿ ಎ.ವಿ. ಸಮೃದ್ಧಿ, ವಿಶ್ವ ಕುಮಾರ್ ಅವರ ಪುತ್ರ ನಿಶಾನ್ ಇ.ವಿ., ಕೃಷ್ಣ ಅವರ ಪುತ್ರಿಯರಾದ ಎಂ.ಕೆ. ಜೀಷ್ಮಾ, ಜಸ್ಮಿತಾ, ಕೆ.ಬಿ. ಜಗದೀಶ್ ಅವರ ಪುತ್ರ ಕೆ.ಜೆ. ಮೋದಕ್, ಸುನಿಲ್ ಅವರ ಪುತ್ರ ಕೆ.ಎಸ್. ರೆನಿಲ್, ಅಲ್ಲಾರಂಡ ವಿಠಲ ನಂಜಪ್ಪ ಅವರ ಪುತ್ರ ರಸಜ್ನ ಮಾದಪ್ಪ, ಪ್ರಭುದೇವ್ ಅವರ ಪುತ್ರಿಯರಾದ ಇಂಚರ ಹಾಗೂ ಚಿತ್ತಾರ ಸೇರಿದಂತೆ ಕೊಡವ ಸ್ನಾತಕೋತ್ತರದಲ್ಲಿ ಶೇ 79 ಅಂಕ ಗಳಿಸಿದ ಸಂಘದ ಸದಸ್ಯರಾದ ಬೊಳ್ಳಜಿರ ಬಿ. ಅಯ್ಯಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.









