ಸೋಮವಾರಪೇಟೆ ಜು.29 : ಸೋಮವಾರಪೇಟೆ ತಾಲ್ಲೂಕು ಸಾಮಾಜಿಕ ಅರಣ್ಯ ವಲಯದ ವತಿಯಿಂದ ಹುದುಗೂರು ಗ್ರಾಮದ ಸಾಮಾಜಿಕ ಅರಣ್ಯ ವಲಯ ಕ್ಷೇತ್ರದಲ್ಲಿ 2023-24ನೇ ಸಾಲಿನ ಮಳೆಗಾಲದಲ್ಲಿ ನಡೆಸಲು ವಿವಿಧ ಸಸಿಗಳನ್ನು ಬೆಳೆಸಲಾಗಿದ್ದು, ರೈತರಿಗೆ ಪರಿಸ್ಕೃತ ದರದಲ್ಲಿ ವಿತರಿಸಲಾಗುತ್ತಿದೆ.
ನೇರಳೆ, ಮಹಾಗನಿ, ಬಿದಿರು, ನೆಲ್ಲಿ, ಸೀಬೆ, ಬಿದಿರು, ಶಿವನಿ, ಕಹಿಬೇವು, ಬಿಲ್ವಪತ್ರೆ, ರಕ್ತಚಂದನ, ಹೊನ್ನೆ, ಚಕ್ಕೆ, ಮುಳ್ಳು ಸಂಪಿಗೆ, ತೇಗ, ಹೆಬ್ಬೇವು, ಹಲಸು, ಹೆಬ್ಬಲಸು ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲಾಗಿದೆ. ಸಾರ್ವಜನಿಕರಿಗೆ ಸರ್ಕಾರ ನಿಗಧಿ ಪಡಿಸಿರುವ 6*9 ಅಳತೆಯ ಚೀಲದ ಸಸಿ ಒಂದಕ್ಕೆ ರೂ. 3 ( ಪರಿಸ್ಕೃತ ದರ) ಹಾಗೂ 8*12ರ ಅಳತೆಯ ಸಸಿ ಒಂದಕ್ಕೆ ರೂ 6( ಪರಿಸ್ಕೃತ ದರ)ನ್ನು ಪಾವತಿಸಿ ಪಡೆದುಕೊಳ್ಳಬಹುದಾಗಿದೆ. ರೈತರು ತಮ್ಮ ಆಧಾರ್ ಪ್ರತಿ, ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್ ಪ್ರತಿ ತಮ್ಮ ಜಮೀನಿನ ಆರ್‍ಟಿಸಿ ಪ್ರತಿಯನ್ನು ನೀಡಿ ಸಸಿಗಳನ್ನು ಪಡೆಯಬಹುದು.
ಬಿಪಿಎಲ್ ಕಾರ್ಡ್ ಮತ್ತು ನರೇಗಾ ಉದ್ಯೋಗ ಚೀಟಿ ಹೊಂದಿರುವ ರೈತರಿಗೆ ನೆಟ್ಟ 100 ಸಸಿಗಳಿಗೆ ಸುಮಾರು ರೂ.8 ಸಾವಿರದಿಂದ 14 ಸಾವಿರದವರೆಗೆ ಪ್ರೋತ್ಸಾಹ ಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಉಪ ವಲಯ ಅರಣ್ಯಾಧಿಕಾರಿ 9483646101 ಅಥವಾ 9008994572 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*