ವಿರಾಜಪೇಟೆ ಜು.29 : ವಿರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ನಿ. ಚುನಾವಣೆಯು ತಿಂಗಳ ಅಂತ್ಯ ದಿನದಂದು ನಡೆಯಲಿದ್ದು, ಬ್ಯಾಂಕ್ ನ ಸರ್ವತೋಮುಖ ಬೆಳವಣಿಗೆಗೆ ತಂಡದ ಸದಸ್ಯರಿಗೆ ಮತದಾರರು ಮತ ಚಲಾವಣೆ ಮಾಡುವಂತೆ ಅಭ್ಯರ್ಥಿಗಳು ಮನವಿ ಮಾಡಿದರು.
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಟ್ಟಣ ಸಹಕಾರ ಬ್ಯಾಂಕ್ ನ ಚುನಾವಣೆ ಅಭ್ಯರ್ಥಿಗಳು, ಬ್ಯಾಂಕ್ ಚುನಾವಣೆ ಗೆ ಅರ್ಹ ಮತದಾರರಿಂದ ಮತ ಚಲಾವಣೆ ಮಾಡಲು ಮನವಿ ಮಾಡಿದರು.
ಅಭ್ಯರ್ಥಿ ಪಟ್ಟಡ ರಂಜಿ ಪೂಣಚ್ಚ ಮಾತನಾಡಿ, ಸುಮಾರು 20 ವರ್ಷಗಳಿಂದ ಯಾವುದೇ ಚುನಾವಣೆ ನಡೆಯದೆ ಅವಿರೋಧವಾಗಿ ಬ್ಯಾಂಕ್ ನ ಆಡಳಿತ ಮಂಡಳಿ ಯ ಸದಸ್ಯ ರ ಆಯ್ಕೆ ನಡೆದಿದೆ. ಬ್ಯಾಂಕ್ ನ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪಾರದರ್ಶಕ ಆಡಳಿತ ನೀಡಬೇಕು, ಅಲ್ಲದೆ ಗ್ರಾಹಕರ ಕೈಗೆಟುಕುವ ಕಡಿಮೆ ಬಡ್ಡಿಯಲ್ಲಿ ಸಾಲ ದೊರಬೇಕು, ಗ್ರಾಹಕ ರಿಗೆ ತ್ವರಿತ ವಾಗಿ ವಿವಿದ ಕ್ಷೇತ್ರಕ್ಕೆ ಅನುಗುಣವಾಗಿ ಕಡಿಮೆ ಅವದಿಯಲ್ಲಿ ಸಾಲ ದೊರಕುವಂತೆ ಮಾಡುವುದು ತಂಡದ ನಿರ್ಧಾರ ವಾಗಿದೆ. ಮುಂದೆ ಬ್ಯಾಂಕ್ ನಲ್ಲಿ ನೂತನ ಯೋಜನೆಗಳನ್ನು ಹುಟ್ಟುಹಾಕಲು ಮತದಾರರು ನಮ್ಮ ತಂಡದ ಸದಸ್ಯರಿಗೆ ಮತವನ್ನು ನೀಡಿ ಎಂದು ಮನವಿ ಮಾಡಿದರು.
ನೆಲ್ಲಮಕ್ಕಡ ಪಿ.ಮುತ್ತಣ್ಣ ಮಾತನಾಡಿ, ಬದಲಾವಣೆ ಜಗದ ನಿಯಮ 29 ವರ್ಷಗಳಿಂದ ಚುನಾವಣೆ ಎದುರಾಗಲಿಲ್ಲಾ. ಬ್ಯಾಂಕ್ ಚುನಾವಣೆಯಲ್ಲಿ ಬಹುಮತದಿಂದ ತಂಡದ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಉತ್ತಮ ಸಹಕಾರ ಮಾಹ ಮಂಡಲ ಮಾಡುವತ್ತಾ ಮತ ಕೊಡುಗೆ ನೀಡಿ ಎಂದು ಮನವಿ ಮಾಡಿದರು.
ದಿನಾಂಕ 31-07-2023 ರಂದು ಸೋಮವಾರ ದಿನದಂದು ಮಹಿಳಾ ಸಮಾಜದ ಸಭಾಂಗಣದಲ್ಲಿ ಮತದಾನ ಬೆಳಿಗ್ಗೆ 09- ರಿಂದ ಸಂಜೆ 5 ರ ವರೆಗೆ ನಡೆಯಲಿದೆ. ಆರ್ಹ ಮತದಾರರು ತಮ್ಮ ಮತ ಚಲಾವಣೆ ಮಾಡಬೇಕು ಎಂದು ರಾಜೇಶ್ ಪದ್ಮನಾಭ ಅವರು ಸರ್ವ ಮತದಾರರಲ್ಲಿ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿಗಳಾದ ಸಿ.ಕೆ.ಪ್ರಥ್ವಿನಾಥ್, ಭೀಮಯ್ಯ ನೆಲ್ಲಚಂಡ, ಮರ್ವೀನ್ ಲೋಬೋ, ಸಂತೋಷ್ ಕುಮಾರ್ ಪಿ. ಮಹಿಳಾ ವರ್ಗ ದ ಅಭ್ಯರ್ಥಿಗಳಾದ ದೇಚಮ್ನ ಕಾಳಪ್ಪ, ಲಾಲಿ ಸತೀಶ್ ಕುಮಾರ್, ಹಿಂದುಳಿದ ವರ್ಗದ ಅಭ್ಯರ್ಥಿ ರಫೀಕ್ ಕೋಳುಮಂಡ, ಹಿಂದುಳಿದ ವರ್ಗ ಬಿ ವರ್ಗ ದಿಂದ ಜೋಕೀಂ ರೋಡ್ರಿಗಸ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಕಣಕಿಳಿದಿರುವ ಮಹದೇವ ಹೆಚ್. ಎಂ, ಅವರುಗಳು ಉಪಸ್ಥಿತರಿದ್ದರು.