ಮಡಿಕೇರಿ ಜು.31 : ಪ್ರಸಕ್ತ(2023-24) ಸಾಲಿನ ಪ್ರಧಾನಮಂತ್ರಿ ರಾಷ್ಟೀಯ ಬಾಲ ಪುರಸ್ಕಾರ ಪ್ರಶಸ್ತಿಗಾಗಿ ರಾಷ್ಟ್ರೀಯ ಪ್ರಶಸ್ತಿಗಳ ಪೋರ್ಟಲ್ https://awards.gov.in ನಲ್ಲಿ ಆನ್‍ಲೈನ್ ಅರ್ಜಿ ಸಲ್ಲಿಸಬಹುದಾಗಿದ್ದು, ಮಕ್ಕಳು ಶೌರ್ಯ, ಕ್ರೀಡೆ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಕಲೆ ಮತ್ತು ಸಾಂಸ್ಕೃತಿಕ ಮತ್ತು ನಾವಿನ್ಯತೆ ಕ್ಷೇತ್ರಗಳಲ್ಲಿ ಪ್ರತಿಭೆಯನ್ನು ತೋರಿರುವವರು ರಾಷ್ಟ್ರಮಟ್ಟದ ಪ್ರಶಸ್ತಿಗೆ ಮನ್ನಣೆ ಪಡೆದಿರುತ್ತಾರೆ.
ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಮಕ್ಕಳು ಭಾರತದ ಪ್ರಜೆಯಾಗಿದ್ದು, ಭಾರತದಲ್ಲಿ ವಾಸವಾಗಿರಬೇಕು ಮತ್ತು ಅರ್ಜಿ/ ನಾಮನಿರ್ದೇಶನ ಸಲ್ಲಿಸುವ ಕೊನೆಯ ದಿನಾಂಕಕ್ಕೆ 18 ವರ್ಷ ಮೀರಿರಬಾರದು. ಯಾವುದೇ ಇತರ ವ್ಯಕ್ತಿಯು ಅರ್ಹ ಮಗುವನ್ನು ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಬಹುದು.
ಪಿಎಂಆರ್‍ಬಿಪಿ ಅರ್ಜಿಗಳನ್ನು ಆನ್‍ಲೈನ್ ಪೋರ್ಟಲ್ (https://awards.gov.in) ನಲ್ಲಿ ಮಾತ್ರ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್, 31 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ನ್ಯಾಷನಲ್ ಅವಾರ್ಡ್ ಪೋರ್ಟಲ್‍ನ ವೆಬ್‍ಸೈಟ್ https://awards.gov.in ನ್ನು ವೀಕ್ಷಿಸಬಹುದು. ಹಾಗೂ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಡಿಕೇರಿ ಇವರ ದೂ.ಸಂ.08272-298379 ನ್ನು ಸಂಪರ್ಕಿಸಬಹುದು ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.








