ಮಡಿಕೇರಿ ಆ.1 : ಓಂ ಯುವಕ ಸಂಘದ ಆಶ್ರಯದಲ್ಲಿ ಎರಡನೇ ವರ್ಷದ ಹಿಂದೂ ಕಪ್ ಕೆಸರುಗದ್ದೆ ಕ್ರೀಡಾಕೂಟವು ಸಂಭ್ರಮದಿಂದ ನಡೆಯಿತು. ಅರ್ವತೋಕ್ಲು ಅಪ್ಪಂಗಳದ ಶ್ರೀಪತಿ ಹೆಬ್ಬಾರ್ ಅವರ ಗದ್ದೆಯಲ್ಲಿ ನಡೆದ ಕ್ರೀಡಾಕೂಟವನ್ನು ಊರಿನ ಹಿರಿಯರು ಹಾಗೂ ದಾನಿಗಳಾದ ಶಂಕರ ನಾರಾಯಣ ಭಟ್ ಉದ್ಘಾಟಿಸಿದರು. ಕ್ರಿಕೆಟ್, ಹಗ್ಗಜಗ್ಗಾಟ, ರಿಲೆ ಓಟದ ಸ್ಪರ್ಧೆಗಳಲ್ಲಿ ಹಿರಿಯರು ಹಾಗೂ ಕಿರಿಯರು ಮಿಂಚಿದರು.
ಕ್ರಿಕೆಟ್‍ನಲ್ಲಿ ಎಂಸಿಬಿ ಮದೆನಾಡ್ ತಂಡ ಪ್ರಥಮ, ಭಗವತಿ ಬಿ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು.
ಹಗ್ಗಜಗ್ಗಾಟದಲ್ಲಿ ಕಗ್ಗೋಡ್ಲು ಬಿ ತಂಡ ಪ್ರಥಮ, ಆದರ್ಶ ಸಂಪಾಜೆ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಇದಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ಥಳ ದಾನಿಗಳಾದ ಶ್ರೀಪತಿ ಹೆಬ್ಬಾರ್ ಹಾಗೂ ಬೆಪ್ಪುರನ ಭವಾನಿ ಸುಬ್ರಾಯ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಪಡಂಡ ಭೀಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾನಿಗಳು ಹಾಗೂ ಹಿರಿಯರಾದ ಶಂಕರ ನಾರಾಯಣ ಭಟ್, ಚರುಮಾಡಂಡ ಸತೀಶ್, ದಿನೇಶ್ ಕರುಂಬಯ್ಯ, ನೆಯ್ಯಣಿರ ಹೇಮಕುಮಾರ್, ಮೊಟ್ಟೆರ ಪಳಂಗಪ್ಪ ಹಾಜರಿದ್ದರು.
ಸಮಾರೋಪ ಸಮಾರಂಭದಲ್ಲಿ ಭೀಮಯ್ಯ, ಬೆಟ್ಟಗೇರಿ ಗ್ರಾ.ಪಂ ಅಧ್ಯಕ್ಷ ರ್ಯಾಲಿ ಮಾದಯ್ಯ, ಕೆದಂಬಾಡಿ ಪುಟ್ಟಯ್ಯ, ತೋರೇರ ಲೀಲಾವತಿ, ಚರುಮಾಡಂಡ ಸತೀಶ್, ಚಳಯಂಡ ಯತೀಶ್, ವಕೀಲೆ ಜ್ಯೋತಿ ಶಂಕರ್, ಮಾಜಿ ಸೈನಿಕ ಸುದೀಪ್ ಹಾಗೂ ಓಮ್ ಯುವಕ ಸಂಘದ ಸದಸ್ಯರು ಹಾಜರಿದ್ದರು.









