ಸುಂಟಿಕೊಪ್ಪ ಆ.4 : ಕೊಡಗು ಜಿಲ್ಲಾ ಶಿಕ್ಷಣ ಪೌಂಡೇಶನ್ ವತಿಯಿಂದ ಗರಗಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಆರೋಗ್ಯ ಅರಿವು’ ಕಾರ್ಯಕ್ರಮ ನಡೆಯಿತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರೋಗ್ಯ ಕಾರ್ಯಕರ್ತೆ ಗ್ರೀಷ್ಮ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ಸಂಪೂರ್ಣವಾಗಿ ಆರೋಗ್ಯವಂತರಾಗಿ ಇರಬೇಕಾದರೆ, ವೈಯಕ್ತಿಕ ಸ್ವಚ್ಚತೆಯನ್ನು ಕಾಯ್ದುಕೊಳ್ಳುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ. ನಾವು ನಿತ್ಯ ಜೀವನದಲ್ಲಿ ಸ್ವಚ್ಚತೆಗೆ ಆಧ್ಯತೆ ನೀಡುವುದರಿಂದ ಹೆಚ್ಚು ದಿನಗಳಕಾಲ ಉತ್ತಮ ಆರೋಗ್ಯವಂತರಾಗಿ ಜೀವಿಸಲು ಸಾಧ್ಯವಾಗಲಿದೆ ಎಂದರು.
ವೈಯಕ್ತಿಕ ಮುನ್ನಚ್ಚರಿಕ ಕ್ರಮಗಳ ಬಗ್ಗೆ ಕಿವಿಮಾತು ಹೇಳಿದರು.
ಸಿಆರ್‍ಪಿ ಬಿಪಿನ್ ಮಾತನಾಡಿ, ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿರಬೇಕಾದರೆ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಅತ್ಯವಶ್ಯಕವಾಗಿದೆ. ಆದುದ್ದರಿಂದ ದೈನಂದಿನ ಆಹಾರ ಸೇವನೆಯಲ್ಲಿ ಪೌಷ್ಠಿಕ ಆಹಾರವನ್ನೇ ಸೇವೆನೆ ಮಾಡುವುದ್ದರಿಂದ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಬಹುದೆಂದರು.
ಸಮಾರಂಭದ ವೇದಿಕೆಯಲ್ಲಿ ಸಿಎಚ್‍ಓ ರಫೀನಾ, ಪ್ರೇರಣಾ, ಕಾರ್ಯಕ್ರಮ ಜಿಲ್ಲಾ ಸಂಯೋಜಕ ಶಿವಕುಮಾರ್, ಮಾದಾಪುರ ಕ್ಲಸ್ಟರ್ ಸಿಆರ್‍ಪಿ ಬಿಪಿನ್, ಆಶಾ ಕಾರ್ಯಕರ್ತೆ ಚಿತ್ರ, ಪ್ರೇಮ ಮತ್ತಿತರರು ಇದ್ದರು.
ಸಮಾರಂಭದ ಮೊದಲಿಗೆ ಶಾಲಾ ಮುಖ್ಯಶಿಕ್ಷಕಿ ಸ್ವಾಗತಿಸಿ, ಶಿಕ್ಷಕಿ ಶಶಿರೇಖಾ ವಂದಿಸಿದರು.









