ಬೆಂಗಳೂರು : ಗೂಗಲ್ ಕ್ರೋಮ್ ಬಳಕೆದಾರರಿಗೆ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ ಕಾರ್ಯನಿರ್ವಹಿಸುವ CERT ಎಚ್ಚರಿಕೆ ನೀಡಿದೆ.
ಕ್ರೋಮ್‌ನ ನಿರ್ದಿಷ್ಟ ಆವೃತ್ತಿಗಳಲ್ಲಿ ದೋಷ ಪತ್ತೆಹಚ್ಚಿರುವ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ, ಸಂಭಾವ್ಯ ಭದ್ರತಾ ಅಪಾಯದ ಬಗ್ಗೆ ಎಚ್ಚರಿಕೆ ರವಾನಿಸಿದೆ. ಫಿಲ್ಡಿಂಗ್ ಅಟ್ಯಾಕ್, ಡೇಟಾ ಉಲ್ಲಂಘನೆಗೆ ಸಂಬಂಧಿಸಿದಂತೆ ಅಪಾಯ ಎದುರಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಆ್ಯಪ್ ಆಪ್‌ಡೇಟ್ ಮಾಡುವಂತೆ ಬಳಕೆದಾರರಿಗೆ ತಿಳಿಸಿದೆ.