ಸುಂಟಿಕೊಪ್ಪ,ಆ.11 : ಐಗೂರು ಗ್ರಾ.ಪಂ ಯ 2ನೇ ಅವಧಿಯ ಅಧ್ಯಕ್ಷರಾಗಿ ಜಿ.ಕೆ.ವಿನೋದ್(ವಿನು) ಹಾಗೂ ಉಪಾಧ್ಯಕ್ಷರಾಗಿ ಯಡವನಾಡಿನ ಗೌರಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಬಿಸಿಎಂಎಗೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ–ಉಪಾಧ್ಯಕ್ಷ ಚುನಾವಣೆಗೆ ತಲಾ ಒಂದೊಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವುದರಿಂದ ಚುನಾವಣಾಧಿಕಾರಿಯಾದ ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಾಲಕೃಷ್ಣ ರೈ ಅವರು ಅಧ್ಯಕ್ಷರಾಗಿ ವಿನೋದ್ ಹಾಗೂ ಉಪಾಧ್ಯಕ್ಷರಾಗಿ ಗೌರಮ್ಮ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಐಗೂರು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎಸ್.ಬಾಲಕೃಷ್ಣ ರೈ, ಗ್ರಾ.ಪಂ ಸದಸ್ಯರುಗಳಾದ ವಿನೋದ್, ಗೌರಮ್ಮ, ಲಿಂಗೇರಿ ರಾಜೇಶ, ಬಾರನ ಪ್ರಮೋದ್, ಜಾನಕಿಮೇದಪ್ಪ, ಬೇಬಿ, ಜುನೈದ್, ಜೋಯಪ್ಪ, ಪೂರ್ಣಿಮ, ಪವಿತ್ರ ಹಾಗೂ ಪಾರ್ವತಿ ಹಾಗೂ ಗ್ರಾ.ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸೋಮವಾರಪೇಟೆ ತಾಲೂಕು ಬಿಜೆಪಿ ಉಪಾಧ್ಯಕ್ಷ ಎಂ.ಎ.ಪ್ರಭಾಕರ, ಟಿ.ಕೆ.ರಮೇಶ ಉಪಸ್ಥಿತರಿದ್ದರು.









