ಮಡಿಕೇರಿ ಆ.12 : ಕೊಡಗು ಜಿಲ್ಲೆಯ ಹಲವೆಡೆ ಕಾಡಾನೆಗಳ ಮೇಲೆ ದ್ವೇಷ ಸಾಧನೆ ಆಗುತ್ತಿದ್ದು ವನ್ಯಜೀವಿಗಳ ಹತ್ಯೆಗಳು ನಡೆಯುವುದು ಕಂಡು ಬಂದಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ತಿಳಿಸಿದ್ದಾರೆ.
ಅವರು ಕುಶಾಲನಗರದ ಸಮೀಪದ ಹಾರಂಗಿ ಆನೆ ಶಿಬಿರದಲ್ಲಿ ನಡೆದ ಆನೆ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಆನೆಗಳು ಪರಿಸರದ ಭಾಗವಾಗಿದ್ದು, ಪ್ರಕೃತಿಯ ಸಂರಕ್ಷಣೆ ಆದಲ್ಲಿ ಮಾತ್ರ ಮಾನವನ ಉಳಿವುಸಾಧ್ಯ ಎಂದರು. ದೇಶದಲ್ಲಿ ಆನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ರಾಜ್ಯದಲ್ಲಿ 6 ಸಾವಿರಕ್ಕೂ ಅಧಿಕ ಆನೆಗಳಿದ್ದು ಜಿಲ್ಲೆಯಲ್ಲಿ ಕೂಡ ಆನೆಗಳ ಸಂಖ್ಯೆ ಏರಿಕೆ ಕಂಡು ಬಂದಿದೆ. ಆನೆ ಮಾನವ ಸಂಘರ್ಷಕ್ಕೆ ನಾವುಗಳೇ ಪರಿಹಾರ ಹುಡುಕಬೇಕಾಗಿದೆ. ಅವುಗಳ ಸಂರಕ್ಷಣೆ ನಮ್ಮಿಂದಲೇ ಆಗಬೇಕಾಗಿದೆ ಎಂದರು.
ಈ ಸಂದರ್ಭ ಮಾತನಾಡಿದ ವನ್ಯಜೀವಿ ತಜ್ಞರಾದ ಡಾ ಚಿಟ್ಟಿಯಪ್ಪ, ಆನೆಗಳ ಆಹಾರ, ಓಡಾಡುವ ಪ್ರದೇಶಗಳ ಕೊರತೆ ಹಾಗೂ ಪ್ರಾಕೃತಿಕ ಪರಿಸರ ನಾಶ ಪ್ರಸಕ್ತ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ. ಅರಣ್ಯ ನಾಶ ಕಾಡಿನಲ್ಲಿ ಕಂಡು ಬರುವ ಕಾಡ್ಗಿಚ್ಚು ಮತ್ತು ಆನೆಗಳು ವಲಸೆ ತೆರಳುವ ಸಂದರ್ಭ ಆಗುವ ಆಗುವ ಅಡ್ಡಿ ಆತಂಕಗಳು ಆನೆ- ಮಾನವ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಕಾಡಾನೆಗಳಿಗೆ ಪ್ರತಿನಿತ್ಯ ಅಂದಾಜು 350 ಕೆಜಿ ಪ್ರಮಾಣದ ಆಹಾರ, ನೀರು ಮತ್ತು ಅವುಗಳ ಓಡಾಟಕ್ಕೆ ಅಗತ್ಯವಿರುವ 50 ರಿಂದ 60 ಕಿಲೋಮೀಟರ್ ಸುತ್ತಳತೆಯ ಅರಣ್ಯದ ಅಗತ್ಯತೆ ಇದೆ ಎಂದರು.
ಆನೆ ಸೂಕ್ಷ್ಮ ಪ್ರಾಣಿಯಾಗಿದ್ದು ಅದರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು. ಇದೇ ಸಂದರ್ಭ ಮಾತನಾಡಿದ ಅವರು ಶಿಬಿರದಲ್ಲಿರುವ ಎಲ್ಲಾ ಆನೆಗಳು ಆರೋಗ್ಯಕರವಾಗಿದೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಆನೆ ದಿನಾಚರಣೆ ಅಂಗವಾಗಿ ಹಾರಂಗಿ ಶಿಬಿರದಲ್ಲಿದ್ದ ವಿಕ್ರಮ, ಕರ್ಣ, ವಿಕ್ರಮ, ರಾಮ, ಈಶ್ವರ, ಲಕ್ಷ್ಮಣ, ಏಕದಂತ ಆನೆಗಳಿಗೆ ಅಧಿಕಾರಿ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಕಬ್ಬು ಬಾಳೆಹಣ್ಣು ಹಲಸು ಬಾಳೆಗೊನೆ ಹಲವು ರೀತಿಯ ತರಕಾರಿಗಳನ್ನು ನೀಡಲಾಯಿತು.
ಈ ಸಂದರ್ಭ ಕೂಡಿಗೆ ಸೈನಿಕ ಶಾಲೆಯ ವಿದ್ಯಾರ್ಥಿಗಳಿಗೆ ವನ್ಯಜೀವಿ ತಜ್ಞರಾದ ಡಾ ಚಿಟ್ಟಿಯಪ್ಪ ಆನೆಗಳ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಸೋಮವಾರಪೇಟೆ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಎ. ಎ ಗೋಪಾಲ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ ವಿ ಶಿವರಾಮ್, ವನ್ಯಜೀವಿ ವಲಯದ ಅಧಿಕಾರಿಗಳಾದ ವಿನೋದ್ ಬಾಬು, ಕೊಟ್ರೇಶ್, ಉಪವಲಯ ಅರಣ್ಯ ಅಧಿಕಾರಿಗಳಾದ ಅನಿಲ್ ಡಿಸೋಜಾ, ರಂಜನ್, ದೇವಯ್ಯ, ವಿಲಾಸ್,, ಶ್ರವಣ್ ಕುಮಾರ್, ಚೇತನ್ ಮಾವುತರು ಕವಾಡಿಗರು ಮತ್ತು ಸಿಬ್ಬಂದಿಗಳು ಇದ್ದರು.
ಆನೆ ದಿನಾಚರಣೆ ಅಂಗವಾಗಿ ಶಿಬಿರದ ಆನೆಗಳನ್ನು ಸಿಂಗರಿಸಲಾಗಿತ್ತು.
Breaking News
- *ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ : ಮಾ.11ಕ್ಕೆ ವಿಚಾರಣೆ ಮುಂದೂಡಿಕೆ*
- *ಜ.25 ರಂದು ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮ*
- *ಜ.30 ರಂದು ಹುತಾತ್ಮರ ದಿನಾಚರಣೆ : ಮಡಿಕೇರಿಯಲ್ಲಿ ಪೂರ್ವಭಾವಿ ಸಭೆ*
- *ಹೈದರಾಬಾದ್ನಲ್ಲಿ ಗಮನ ಸೆಳೆದ ಕುಡಿಯರ ಉರುಟಿಕೊಟ್ಟ್ ಪಾಟ್ ನೃತ್ಯ*
- *ಮಡಿಕೇರಿ : ಜ.28 ರಂದು ಕುಂದುರುಮೊಟ್ಟೆ ದಸರಾ ಉತ್ಸವ ಸಮಿತಿಯ ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ “ದಶಮಿ” ಬಿಡುಗಡೆ*
- *ಮಡಿಕೇರಿಯ ಡಾ.ಅಂಬೇಡ್ಕರ್ ಭವನವನ್ನು ದಲಿತ ಸಂಘರ್ಷ ಸಮಿತಿಯ ವಶಕ್ಕೆ ನೀಡಿ*
- *‘ಸಂವಿಧಾನ್ ಸಮ್ಮಾನ್ ಅಭಿಯಾನ್’ : ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿಯಾಗಿ ನಡೆದುಕೊಂಡವರ ಬಣ್ಣ ಬಯಲು*
- *ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ ಕಾರ್ಯಕ್ರಮ ಉದ್ಘಾಟನೆ : ಮಂಡ್ಯದಲ್ಲಿ ಸಂಯೋಜಿತ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ : ಮುಖ್ಯಮಂತ್ರಿ ಸಿದ್ದರಾಮಯ್ಯ
- *ಭಾಗಮಂಡಲದಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ : ಗೌರವ ಸಮರ್ಪಣೆ*
- *ಬಲ್ಲಮಾವಟಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ : ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ : ಡಾ.ಶೈಲಜಾ ಸಲಹೆ*