ಮಡಿಕೇರಿ ಆ.14 : ಕೊಡಗು ಜಿಲ್ಲೆಯಾದ್ಯಂತ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಹೋಟೆಲ್, ರೆಸ್ಟೋರೆಂಟ್‍ಗಳು, ರೆಸಾರ್ಟ್‍ಗಳು, ಕಾರ್ಖಾನೆಗಳು, ಕೈಗಾರಿಕಾ ಸಂಸ್ಥೆಗಳು, ಪ್ಲಾಂಟೇಷನ್‍ಗಳು ಹಾಗೂ ಇತರೆ ಸಂಸ್ಥೆಗಳು ಆ.15 ರಂದು ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಕಡ್ಡಾಯವಾಗಿ ತಮ್ಮಲ್ಲಿ ಕೆಲಸ ಮಾಡುವ ನೌಕರರಿಗೆ ವೇತನ ಸಹಿತ ರಜೆಯನ್ನು ನೀಡಲು ಸೂಚಿಸಿದೆ.
ತಪ್ಪಿದಲ್ಲಿ ಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆಗಾಗಿ ಸಂಬಂಧಿಸಿದವರ ವಿರುದ್ಧ ಕಾಯ್ದೆ ಮತ್ತು ನಿಯಮಗಳಡಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಉಪ ವಿಭಾಗದ ಕಾರ್ಮಿಕ ಅಧಿಕಾರಿ ಹರ್ಷವರ್ಧನ ತಿಳಿಸಿದ್ದಾರೆ.