ಚೆಯ್ಯಂಡಾಣೆ ಆ 15 : ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಭಾರತೀಯ ಸೇನೆಯ ಯೋಧ ಹವಾಲ್ದಾರ್ ಚೈಯಂಡ ಶಂಕರಿ ಧ್ವಜಾರೋಹಣ ನೆರವೆರಿಸಿದರು.
ಮುಖ್ಯ ಶಿಕ್ಷಕಿ ಹೇಮಾ ಕುಮಾರಿ ದಿನದ ಮಹತ್ವದ ಕುರಿತು ಮಾತನಾಡಿದರು.
ವಿದ್ಯಾರ್ಥಿಗಳಿಂದ ದಿನದ ಮಹತ್ವದ ಕುರಿತು ಭಾಷಣ, ಹಾಡು, ರಾಷ್ಟ ಗೀತೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶಾಲೆಯಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಈ ಸಂದರ್ಭ ಎಸ್ ಡಿ ಎಂ ಸಿ ಅಧ್ಯಕ್ಷ ರತ್ನಾ,ಚೈಯಂಡ ಲವ ಅಪ್ಪಚ್ಚು, ಶಾಲಾ ಶಿಕ್ಷಕ ವೃಂದ ದವರು,ಎಸ್ ಡಿ ಎಂ ಸಿ ಸದಸ್ಯರು,ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ಅಶ್ರಫ್








