ಮಡಿಕೇರಿ ಆ.16 : ದೇಶಪ್ರೇಮ ಎಂಬುದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ದೇಶಪ್ರೇಮ ಎಂಬುದು ನಮ್ಮ ಮನದಲ್ಲಿ ಸದಾ ಚಿರಂತನವಾಗಿರಬೇಕು. ದೇಶಕ್ಕಾಗಿ ಪ್ರತಿಯೋವ೯ರೂ ನನ್ನ ಕೊಡುಗೆ ಏನು ಎಂದು ಆತ್ಮಾವಲೋಕನ ಮಾಡಿಕೊಂಡು ದೇಶಕ್ಕಾಗಿ ಮಹತ್ತರ ಕೊಡುಗೆ ನೀಡುವಂತಾಗಬೇಕು ಎಂದು ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕ ಶಂಕರ್ ಪೂಜಾರಿ ಹೇಳಿದರು .
ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಸಕಾ೯ರಿ ಬಾಲಕರ ಬಾಲಮಂದಿರದಲ್ಲಿ 77 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ದ್ವಜಾರೋಹಣ ಮಾಡಿದರು. ಬಾಲಮಂದಿರದ ಮಕ್ಕಳು, ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರು ದ್ವಜವಂದನೆ ಕೈಗೊಂಡರು.
ಈ ಸಂದಭ೯ ರೋಟರಿ ನಿದೇ೯ಶಕ ಶಂಕರ್ ಪೂಜಾರಿ ಮಾತನಾಡಿ, ಜಗತ್ತಿನಲ್ಲಿಯೇ ವೈವಿಧ್ಯಮಯ ಭಾಷೆಗಳು, ಸಂಸ್ಕೖತಿ, ಆಚಾರ, ವಿಚಾರ ಹೊಂದಿದ ದೇಶವಾಗಿ ಭಾರತ ಕಂಗೊಳಿಸುತ್ತಿದೆ. ಭಾರತವನ್ನು ನಾನಾ ಕಾರಣಗಳಿಂದ ಹೀಗೆಳೆಯುತ್ತಿದ್ದವರೇ ಇದೀಗ ಭಾರತದ ಹಿರಿಮೆಯನ್ನು ಕೊಂಡಾಡುತ್ತಿದ್ದಾರೆ. ನಮ್ಮ ದೇಶದ ಮಹತ್ವವನ್ನು ತಿಳಿಯುವುದು ಪ್ರತೀಯೋವ೯ರ ಆದ್ಯತೆಯಾದರೇ ದೇಶಪ್ರೇಮ ಎಂಬದು ಮನದಲ್ಲಿ ಚಿರಸ್ಥಾಯಿಯಾಗಿರುತ್ತದೆ ಎಂದು ಹೇಳಿದರು.
ರೋಟರಿ ಮಿಸ್ಟಿ ಹಿಲ್ಸ್ ಪ್ರಮೋದ್ ಕುಮಾರ್ ರೈ ಮಾತನಾಡಿ, ತಮ್ಮ ಬದುಕಿನ ಭವಿಷ್ಯವಾಗಿರುವ ಭಾರತ ದೇಶಕ್ಕೆ ಪ್ರತೀಯೋವ೯ರೂ ಚಿರಋಣಿಯಾಗಿರಬೇಕು. ಭಾರತದಲ್ಲಿ ಈಗ ಸಾಕಷ್ಟು ಅವಕಾಶಗಳಿದ್ದು, ಮೊದಲು ವಿದೇಶಗಳಿಗೆ ಉದ್ಗೋಗ ಅರಸಿ ತೆರಳುತ್ತಿದ್ದ ಸಂದಭ೯ಗಳು ಕಣ್ಮರೆಯಾಗಿ ಈಗ ವಿದೇಶಿಯರೇ ಭಾರತಕ್ಕೆ ಕೆಲಸಕ್ಕಾಗಿ ಬರುವಂತಾಗಿದೆ. ಭಾರತ ಎಂಬುದು ಅವಕಾಶಗಳನ್ನು ಸೖಷ್ಟಿಸುವ ದೇಶವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಈ ದೇಶದಲ್ಲಿಯೇ ಕೆಲಸ ಕಂಡುಕೊಂಡು ಭಾರತಕ್ಕಾಗಿ ಪ್ರತೀಯೋವ೯ರೂ ಏನಾದರೂ ಕೊಡುಗೆ ನೀಡುವಂತಾಗಬೇಕು ಎಂದು ಕರೆ ನೀಡಿದರು.
ರೋಟರಿ ವಲಯ 6 ರ ಸಹಾಯಕ ಗವನ೯ರ್ ದೇವಣಿರ ತಿಲಕ್, ಭವಿಷ್ಯದಲ್ಲಿ ಗುರಿ ಹೊಂದಿ ಆ ಗುರಿ ತಲುಪುವ ನಿಟ್ಟಿನಲ್ಲಿ ಮಕ್ಕಳು ಈಗಿನಿಂದಲೇ ಪ್ರಯತ್ನಿಸಬೇಕು ಎಂದರಲ್ಲದೇ, ಪ್ರತೀ ಮಕ್ಕಳಲ್ಲಿಯೂ ಇರುವ ವಿಶೇಷ ಪ್ರತಿಭೆಯನ್ನು ಪೋಷಿಸಿದರೆ ಏನು ಬೇಕಾದರೂ ಸಾಧಿಸಲು ಸಾಧ್ಯ ಎಂದರು. ನಿವೖತ್ತ ಸೇನಾನಿ ಕಾಳಪಂಡ ಬೋಪಯ್ಯ ಮಾತನಾಡಿ, ದೇಶಸೇವೆ. ದೇಶಾಭಿಮಾನದ ಮಹತ್ವದ ಬಗ್ಗೆ ತಿಳಿಹೇಳಿದರು.
ರೋಟರಿ ನಿದೇ೯ಶಕ ಬಿ.ಜಿ.ಅನಂತಶಯನ ಸ್ವಾತಂತ್ರ್ಯ ಕುರಿತಾಗಿ ಕವನ ವಾಚಿಸಿದರು. ಬಾಲಮಂದಿರದ ಅಧೀಕ್ಷಕರಾದ ಶ್ರೀಧರ ಕೆ.ಎಸ್. ಸ್ವಾತಂತ್ರ್ಯ, ದೇಶಭಕ್ತಿಯು ಮನಸ್ಸಿನಲ್ಲಿ ಉಂಟು ಮಾಡುವ ಸ್ಪೂತಿ೯ಯ ಬಗ್ಗೆ ಮಾತನಾಡಿದರು. ಸಕಾ೯ರಿ ಬಾಲಕರ ಬಾಲಮಂದಿರದ ಆಪ್ತಸಮಾಲೋಚಕರಾದ ನಾಗಭೂಷಣ ಸ್ವಾಗತಿಸಿ, ನಿರೂಪಿಸಿದರು. ಮಿಸ್ಟಿ ಹಿಲ್ಸ್ ಕಾಯ೯ದಶಿ೯ ರತ್ನಾಕರ್ ರೈ ವೇದಿಕೆಯಲ್ಲಿದ್ದರು.









