ಮಡಿಕೇರಿ ಆ.16 – ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ನಗರದ ಆಂಜನೇಯ ದೇವಸ್ಥಾನದ ಸಮೀಪ ಓಂಕಾರ್ ಬಾಯ್ಸ್ ಆಟೋ ಚಾಲಕರ ಸಂಘದ ಸಹಯೋಗದಲ್ಲಿ ಸಂಭ್ರಮದ ಸ್ವಾತಂತ್ರ್ಯ ಉತ್ಸವವನ್ನು ಆಚರಿಸಲಾಯಿತು.
ಆರಂಭದಲ್ಲಿ ಧ್ವಜಾರೋಹಣಗೈದ ರೋಟರಿ ವುಡ್ಸ್ ನ ಅಧ್ಯಕ್ಷ ಕೆ.ವಸಂತ್ ಕುಮಾರ್ , ಪ್ರೀತಿ, ಸಹಕಾರ, ಮಾನವೀಯತೆಯೊಂದಿಗೆ ದೇಶಭಕ್ತಿಯನ್ನು ಸಾರುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಮಡಿಕೇರಿಯ ಹಿರಿಯ ಆಟೋ ಚಾಲಕರಾಗಿರುವ ಬಡೇ ಸಾಬ್ ಅವರನ್ನು ರೋಟರಿ ವುಡ್ಸ್ ವತಿಯಿಂದ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ರೋಟರಿ ವಲಯ ಸೇನಾನಿ ಸಂಪತ್ ಕುಮಾರ್, ರೊಟರಿ ಸದಸ್ಯರಾದ ರವಿ ಕುಮಾರ್, ಲೋಕೇಶ್, ರವೀಂದ್ರ, ಪ್ರವೀಣ್, ರಾಜೇಶ್ ಚೌದರಿ, ಧನಂಜಯ ಶಾಸ್ತ್ರಿ, ಲೀಲಾವತಿ, ಗೀತಾ ಸೂರ್ಯ, ಪ್ರಕೃತಿ ಸುರೇಶ್, ಕಶ್ಯಪ್ , ಓಂಕಾರ್ ಬಾಯ್ಸ್ ಆಟೋ ಚಾಲಕರ ಸಂಘದ ಪ್ರಮುಖರಾದ ಹೇಮಂತ್, ಸುನಿಲ್, ಆದಿ, ಯತೀಶ್,ಉಮೇಶ್, ಲೋಕೇಶ್ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.











