ಮಡಿಕೇರಿ ಆ.16 : ಮಡಿಕೇರಿ ಕೊಡವ ಸಮಾಜದಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಅವರು ಧ್ವಜಾರೋಹಣ ಮಾಡುವ ಮೂಲಕ ನಾಡಿನ ಜನತೆಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಸಮಾಜದ ಉಪಾಧ್ಯಕ್ಷ ನಂದಿನೆರವಂಡ ಚೀಯಣ್ಣ, ಕಾರ್ಯದರ್ಶಿ ಕನ್ನಂಡ ಸಂಪತ್ ಕುಮಾರ್, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ನಿರ್ದೇಶಕರುಗಳಾದ ಕೇಕಡ ವಿಜುದೇವಯ್ಯ, ಮಂಡಿರಸದಾಮುದ್ದಪ್ಪ, ಬೊಪ್ಪಂಡ ಸರಳಾ ಕರುಂಬಯ್ಯ, ಸದಸ್ಯರುಗಳಾದ ಚೋವಂಡ ಕಾಳಪ್ಪ, ಚೊಟ್ಟೆಯಂಡ ಸಂಜು, ಮಣವಟ್ಟಿರ ಚಿಣ್ಣಪ್ಪ, ಕುಡುವಂಡ ಉತ್ತಪ್ಪ, ಚೊಟ್ಟೆಯಂಡ ಅಪ್ಪಾಜಿ, ಪುಟ್ಟಿಚಂಡ ಡಾನ್ ದೇವಯ್ಯ ಹಾಗೂ ಸಮಾಜದ ಸಿಬ್ಬಂದಿವರ್ಗ ಹಾಜರಿದ್ದರು.










