ಸಿದ್ದಾಪುರ ಆ.19 : ಸಿದ್ದಾಪುರ ಗುಯ್ಯ ಅಗಸ್ತೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಎಸ್. ವೆಂಕಟೇಶ್ 6ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಎಂ.ಬಿಜೋಯ್ 3ನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನಿರ್ದೇಶಕರುಗಳಾಗಿ ಕೆ.ಕೆ ಚಂದ್ರಕುಮಾರ್, ಪಿ.ಕೆ .ಚಂದ್ರನ್, ಶಿಬು ಚಾಕೋ,ಕೆ.ಎಸ್ ಸುನೀಲ್, ದೇವಯಾನಿ,ಪ್ರಮೀಳಾ, ಎಸ್.ಬಿ ಪ್ರತೀಶ್,ಬಶೀರ್ ವಿ.ಕೆ, ಕೆ.ಸಿ ಮಿಲನ್, ಚೆಲುವಯ್ಯ ಹೆಚ್.ಕೆ, ಸಿ.ವಾಸು ಅಯ್ಕೆಯಾಗಿದ್ದಾರೆ.
ಈ ಸಂದರ್ಭ ಚುನಾವಣಾ ಅಧಿಕಾರಿ ಸಂದೀಪ್, ಕಾರ್ಯನಿರ್ವಣಾಧಿಕಾರಿ ಪ್ರಸನ್ನ ಹಾಜರಿದ್ದರು.
ಇತ್ತೀಚಿಗೆ ಆಡಳಿತ ಮಂಡಳಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಎಂ.ಎಸ್.ವೆಂಕಟೇಶ್ ಪಡೆದ ಮತಗಳು (619), ಕೆ.ಕೆ.ಚಂದ್ರಕುಮಾರ್ ಪಡೆದ ಮತಗಳು (504)ಗೆಲುವು, ಬಿಜೋಯ್ ಎಂ ಪಡೆದ ಮತಗಳು (499)ಗೆಲುವು, ಪಿ.ಕೆ .ಚಂದ್ರನ್ ಪಡೆದ ಮತಗಳು (486)ಗೆಲುವು, ಕುಕ್ಕೂನೂರು ಸುನೀಲ್ ಪಡೆದ ಮತಗಳು (478)ಗೆಲುವು,
ಶಿಬು ಚಾಕೋ ಪಡೆದ ಮತಗಳು(457)ಗೆಲುವು, ರಂಜನ್ ಪಿ ಕುಕ್ಕೂನೂರು(300)ಸೋಲು, ಟಿ.ಹೆಚ್.ಮಂಜುನಾಥ (277)ಸೋಲು, ಮಹಿಳಾ ಕ್ಷೇತ್ರದಲ್ಲಿ
ದೇವಯಾನಿ(506) ಗೆಲುವು, ಪ್ರಮೀಳಾ (429)ಗೆಲುವು, ಪೂರ್ಣಿಮ(324) ಸೋಲು,
ಸಾಲಗಾರರಲ್ಲದ ಕ್ಷೇತ್ರದಲ್ಲಿ ಪ್ರತೀಶ್ ಎಸ್.ಬಿ (248) ಗೆಲುವು, ದರ್ಶನ್ ಕುಮ್ಮಂಡ (85)ಸೋಲು, ಬಶೀರ್ ವಿ.ಕೆ (ಅವಿರೋಧ ಆಯ್ಕೆ ಪ್ರವರ್ಗ ಎ), ಮಿಲನ್ ಕುಕ್ಕೂನೂರು ಪ್ರವರ್ಗ ಬಿ(ಅವಿರೋದ ಆಯ್ಕೆ), ಚೆಲುವಯ್ಯಹೆಚ್.ಕೆ. (ಪರಿಶಿಷ್ಟ ಜಾತಿ ಅವಿರೋಧ ಆಯ್ಕೆ), ವಾಸು ಸಿ ಮರಾತ(ಪರಿಶಿಷ್ಟ ಪಂಗಡ ಅವಿರೋಧ ಆಯ್ಕೆ) ಸಹಕಾರ ಸಂಘದ ಚುನಾವಣೆಯಲ್ಲಿ ಎಂ ಎಸ್ ವೆಂಕಟೇಶ್ ನೇತ್ರತ್ವದ 13ಮಂದಿ ತಂಡ ಹೆಚ್ಚಿನ ಮತಗಳನ್ನು ಪಡೆದು ಗೆಲುವು ಸಾಧಿಸುವ ಮೂಲಕ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ.
ಈ ಸಂದರ್ಭ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್. ವೆಂಕಟೇಶ್ ಮಾತನಾಡಿ, ಈ ಇಂದಿನ 2 ಭಾರಿ ಆಡಳಿತ ಅವಧಿಯಲ್ಲಿ ಒಂದು ಕೋಟಿಗೂ ಮೀರಿ ಸಂಘ ಲಾಭಗಳಿಸಿದೆ. ಕರಡಿಗೋಡು ರಸ್ತೆಯಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡ ನಂತರ ಬಸ್ ನಿಲ್ದಾಣ ಬಳಿ ಇರುವ ಹಳೆಯ ಕಟ್ಟಡದಲ್ಲಿರುವ ವ್ಯವಹಾರವನ್ನು
ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ ಹಳೆ ಕಟ್ಟಡವನ್ನು ಕೆಡಿವಿ ಅತ್ಯಾಧುನಿಕವಾಗಿ ಹೊಸ ವಾಣಿಜ್ಯ ಸಂಕಿರಣವನ್ನು
ಸಂಘಕ್ಕೆ ಲಾಭ ಸಿಗುವ ರೀತಿಯಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು. ರೈತರಿಗೆ ಸರ್ಕಾರ ಹಾಗೂ ಸಂಘದ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಪಡೆದುಕೊಳ್ಳಲು ಸಹಕಾರ ನೀಡಲಾಗುತ್ತಿದೆ.
ಮಹಿಳಾ ಸಂಘಟನೆಗಳಿಗೆ ಸ್ವಉದ್ಯೋಗದ ಮೂಲಕ ಸಾವಲಂಬಿಗಳಾಗಿ ಸಮಾಜದ ಮುಖ್ಯ ವಾಹಿನಿಗೆ ಬರಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಹಿಳಾ ಸಂಘಟನೆಗಳಿಗೆ ಪ್ರೋತ್ಸಾಹ ನೀಡಲಾಗುವುದು. ಇದರೊಂದಿಗೆ ಇಂದಿನಿಂದಲೂ ಸಹಕಾರಿಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಮುಂದುವರಿಸಲಾಗುವುದು ಎಂದರು.