ನಾಪೋಕ್ಲು ಆ.21 : ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಆ.27ರಂದು ಚೀನ್ಯಾರು ಹತ್ತರ ಅರಾಧನೆ ನಡೆಯಲಿದೆ.
ಇದರೊಂದಿಗೆ ಕಕ್ಕಡಮಾಸದಲ್ಲಿ ವಿರಾಮಗೊಳಿಸಿದ್ದ ಪೂಜೆ, ಉತ್ಸವ,ತುಲಾಭಾರ ಸೇವೆಗಳು ಪುನರಾರಂಭಗೊಳ್ಳಲಿವೆ ಎಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ದೇವತಕ್ಕರಾದ ಪರದಂಡ ಕುಟುಂಬಸ್ಥರು ತಿಳಿಸಿದ್ದಾರೆ.
ವರದಿ : ದುಗ್ಗಳ ಸದಾನಂದ








