ನಾಪೋಕ್ಲು ಆ.21 : ಕಕ್ಕುಂದಕಾಡು ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರದ್ಧಾಭಕ್ತಿಯಿಂದ ಶ್ರಾವಣ ಶನಿವಾರ ವಿಶೇಷ ಪೂಜೆ ನಡೆಯಿತು.
ಪ್ರತಿವರ್ಷದಂತೆ ಶ್ರಾವಣ ಶನಿವಾರ ಪ್ರಯುಕ್ತ ದೇವಾಲಯದಲ್ಲಿ ಮುಂಜಾನೆಯಿಂದಲೇ ಅಭಿಷೇಕ, ವಿವಿಧ ಪೂಜಾ ಕೈಂಕರ್ಯಗಳು ಸೇವೆ, ಸಂಕಲ್ಪ ಪೂಜೆ ನೆರವೇರಿತು.
ಮಧ್ಯಾಹ್ನ ವೆಂಕಟೇಶ್ವರನಿಗೆ ವಿಶೇಷ ಮಹಾಪೂಜೆ, ಮಹಾಮಂಗಳಾರತಿ ನಂತರ ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಿತು.
ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ದೇವಸ್ಥಾನದಲ್ಲಿ ಶ್ರಾವಣ ಶನಿವಾರ ಪೂಜಾ ಕಾರ್ಯಕ್ರಮಗಳು ಸೆಪ್ಟೆಂಬರ್ ಒಂಬತ್ತರವರೆಗೆ ನಡೆಯಲಿವೆ.
ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಮಂಜಯ್ಯ ಟಿ.ಎಸ್, ಕಾರ್ಯಾಧ್ಯಕ್ಷ ಟಿ.ಯನ್. ರಮೇಶ್, ಕಾರ್ಯದರ್ಶಿ ಟಿ.ಎ.ಸುಜಿಕುಮಾರ್ ಹಾಗೂ ಹಿರಿಯರಾದ ಟಿ.ವಿ.ಶ್ರೀನಿವಾಸ, ಟಿ.ಎ.ಆನಂದಸ್ವಾಮಿ, ಪಿ.ಎಂ.ರಾಮಯ್ , ಟಿ.ಆರ್. ಅಪ್ಪ ಸ್ವಾಮಿ, ಟಿ.ಕೆ. ಭವಾನಿ ಹಾಗೂ ಅಡಳಿತ ಮಂಡಳಿ ನಿರ್ದೇಶಕರು ಇತರರು ಹಾಜರಿದ್ದರು.
ದೇವಾಲಯದ ಮುಖ್ಯ ಅರ್ಚಕ ಸುಧೀರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿತು.
ವರದಿ : ದುಗ್ಗಳ ಸದಾನಂದ