ಮಡಿಕೇರಿ ಆ.21 : ವೀರ ಸೇನಾನಿಗಳಾದ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರುಗಳು ಈ ದೇಶಕ್ಕಾಗಿ ರಕ್ಷಣಾ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿರುವುದರಿಂದ ಇವರುಗಳ ಪ್ರತಿಮೆ ಸ್ಥಾಪನೆಯ ಸಂದರ್ಭ ಕೇಂದ್ರ ಸರ್ಕಾರದ ಸಹಭಾಗಿತ್ವ ಅಗತ್ಯವೆಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮುಖಂಡ ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಸ್ ಡಿಕ್ಕಿಯಾಗಿ ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ನೆಲಕ್ಕುರುಳಲು ಮಡಿಕೇರಿ ನಗರದ ಅವೈಜ್ಞಾನಿಕ ರಸ್ತೆ ಮತ್ತು ವೃತ್ತಗಳೇ ಕಾರಣವಾಗಿದೆ. ಈ ಘಟನೆ ನಡೆದಿರುವುದು ವಿಷಾದಕರ, ಅಪಘಾತದಿಂದ ಹಾನಿಗೊಳಗಾಗಿರುವ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಗೌರವಯುತವಾಗಿ ಪುನರ್ ಪ್ರತಿಷ್ಠಾಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಕೇಂದ್ರ ಸರ್ಕಾರದ ಸಹಭಾಗಿತ್ವವೂ ಇರಬೇಕು ಎಂದು ಆಗ್ರಹಿಸಿದ್ದಾರೆ.
ದೇಶದ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ವೀರ ಸೇನಾನಿಗಳ ಪ್ರತಿಮೆ ಪ್ರತಿಷ್ಠಾಪಿಸುವ ವಿಚಾರದಲ್ಲಿ ಕೇಂದ್ರ ಪ್ರಮುಖ ಪಾತ್ರ ವಹಿಸಬೇಕು. ಆ ಮೂಲಕ ಅದು ಯೋಧರಿಗೆ ಗೌರವ ಅರ್ಪಿಸಬೇಕು. ಸ್ಥಳೀಯ ಆಡಳಿತ ಪ್ರತಿಮೆ ಇರುವ ಪ್ರದೇಶಕ್ಕೆ ಗೌರವಯುತ ಸ್ಥಾನಮಾನ ನೀಡಿ ಸಂರಕ್ಷಿಸಬೇಕು ಎಂದು ತಿಳಿಸಿದ್ದಾರೆ.
::: ತಜ್ಞರನ್ನು ನೇಮಿಸಿ :::
ಅಪಘಾತಗಳು ಆಕಸ್ಮಿಕವಾಗಿ ನಡೆಯುತ್ತವೆ, ಜನರಲ್ ತಿಮ್ಮಯ್ಯ ವೃತ್ತದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನ ವಿರುದ್ಧ ಕ್ರಮದ ಅಗತ್ಯವಿಲ್ಲ. ಇದರ ಬದಲಿಗೆ ಮುಂದೆ ಅಪಘಾತಗಳು ಸಂಭವಿಸದಂತೆ ರಸ್ತೆ ಮತ್ತು ವೃತ್ತಗಳಿಗೆ ವೈಜ್ಞಾನಿಕ ಸ್ಪರ್ಷ ನೀಡುವ ಅಗತ್ಯವಿದೆ. ಮಡಿಕೇರಿ ನಗರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳ ಅಭಿವೃದ್ಧಿಗೆ ವೈಜ್ಞಾನಿಕ ರೂಪದಲ್ಲಿ ಯೋಜನೆ ರೂಪಿಸಬೇಕು. ನುರಿತ ತಜ್ಞರ ತಂಡವನ್ನು ನೇಮಕ ಮಾಡಿ ಈ ಕಾಮಗಾರಿಯನ್ನು ಕಾರ್ಯಗತಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.
ನಗರದ ಹೃದಯ ಭಾಗದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಐದು ರಸ್ತೆಗಳು ಸೇರುತ್ತವೆ. ಇಲ್ಲಿ ವಾಹನ ಚಾಲಕರಿಗೆ ಅನೇಕ ಗೊಂದಲಗಳಿವೆ, ಪಾದಾಚಾರಿಗಳು ಕೂಡ ಆತಂಕದಿಂದಲೇ ರಸ್ತೆ ದಾಟಬೇಕಾಗಿದೆ. ಪಕ್ಕದಲ್ಲೇ ಶಾಲೆ, ಪದವಿ ಪೂರ್ವ ಕಾಲೇಜು ಆಸ್ಪತ್ರೆ ಕೂಡ ಇದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಆದ್ದರಿಂದ ಈ ಪ್ರದೇಶದಲ್ಲಿ ತುರ್ತಾಗಿ ವೈಜ್ಞಾನಿಕ ರೂಪದ ವೃತ್ತ ಮತ್ತು ರಸ್ತೆ ವಿಭಜಕವನ್ನು ನಿರ್ಮಿಸಬೇಕು.
ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿ ಕೂಡ ಅವೈಜ್ಞಾನಿಕ ಸಂಚಾರಿ ವ್ಯವಸ್ಥೆ ಇದೆ. ಇಲ್ಲಿಯೂ ತಜ್ಞರ ಸಲಹೆ ಪಡೆದು ವೈಜ್ಞಾನಿಕ ರೂಪದಲ್ಲಿ ವೃತ್ತ ಮತ್ತು ರಸ್ತೆ ವ್ಯವಸ್ಥೆ ಮಾಡಬೇಕೆಂದು ಬ್ರಿಜೇಶ್ ಕಾಳಪ್ಪ ತಿಳಿಸಿದ್ದಾರೆ.
Breaking News
- *ಭಾಗಮಂಡಲ ಫ್ಲೈ ಓವರ್ – ಫ್ಲಾಶ್ ಬ್ಯಾಕ್*
- *ಅರ್ಚಕರ ಮೇಲೆ ನಡೆದ ಹಲ್ಲೆ ಪ್ರಕರಣ : ಸಹಕರಿಸಿದ ಆರೋಪಿಗಳು ಹಾಗೂ ವಾಹನಗಳು ವಶ : ಆರೋಪಿಗಳಿಗೆ ಸಹಾಯ ಮಾಡುತ್ತಿರುವವರ ಕುರಿತು ಮಾಹಿತಿ ಒದಗಿಸಲು ಎಸ್ಪಿ ಮನವಿ*
- *ಮುಖ್ಯಮಂತ್ರಿಗಳಿಗೆ ಕೊಡಗು ಎಸ್ಡಿಪಿಐಯಿಂದ ಪಂಚ ಪ್ರಶ್ನೆ*
- *ಜೀವ ಬೆದರಿಕೆ ಇದೆ ಎಂದು ಆರೋಪಿಸಿ ದೂರು ನೀಡಿದ ಎನ್.ಯು.ನಾಚಪ್ಪ*
- *ಮಡಿಕೇರಿಯಲ್ಲಿ ಹುತಾತ್ಮ ದಿನಾಚರಣೆ : ಗಾಂಧೀಜಿ ತತ್ವ, ಆದರ್ಶ ಮೈಗೂಡಿಸಿಕೊಳ್ಳಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ಕರೆ*
- *ಕೊಡಗು : ಫೆ.13 ರವರೆಗೆ “ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ”*
- *ಒಳಮೀಸಲಾತಿ ಶೀಘ್ರ ಜಾರಿಗೆ ತರಲು ದಲಿತ ಸಂಘರ್ಷ ಸಮಿತಿ ಆಗ್ರಹ*
- *ಮೂರ್ನಾಡು ಗಜಾನನ ಯುವಕ ಸಂಘ ಖಂಡನೆ*
- *ಅಮಾಯಕರ ಮೇಲಿನ ಹಲ್ಲೆ ಖಂಡನೀಯ : ಮೂರ್ನಾಡು ಆಪ್ತಮಿತ್ರ ಬಳಗ ಅಸಮಾಧಾನ*
- *ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದಿಂದ ಸಂಭ್ರಮದ ಪುತ್ತರಿ ಒತ್ತೋರ್ಮೆ ಕೂಟ*