ನಾಪೋಕ್ಲು ಆ.23 : ನಾಪೋಕ್ಲು ಪ್ರಾಥಮಿಕ ಕೃಪಿ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ 43.55 ಲಕ್ಷ ರೂ. ನಿವ್ವಳ ಲಾಭಗಳಿಸಿ ಎ ಶ್ರೇಣಿಯಲ್ಲಿದೆ ಎಂದು ಸಂಘದ ಅಧ್ಯಕ್ಷ ಕಾಂಡoಡ ಸಿ.ಕರುಂಬಯ್ಯ ತಿಳಿಸಿದರು.
ಸಂಘದ ಸಂಭಾoಗಣದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಒಟ್ಟು 2441 ಸದಸ್ಯರಿದ್ದಾರೆ. ಸಂಘದಲ್ಲಿ ಪಾಲು ಬಂಡವಾಳ 1.19 ಕೋಟಿ ರೂ.ಇದೆ. ಸದಸ್ಯರು 35 ಕೋಟಿ ರೂ.ಳನ್ನು ಠೇವಣಿ ಇರಿಸಿದ್ದು ಸದಸ್ಯರಿಗೆ 30.55 ಕೋಟಿ ರೂ.ಗಳನ್ನು ಸಾಲ ರೂಪದಲ್ಲಿ ನೀಡಲಾಗಿದೆ. ದುಡಿಯುವ ಬಂಡವಾಳ 45.84 ಕೋಟಿ ಇದ್ದು, ಸಂಘವು ಪ್ರಸಕ್ತ 2022-23 ಸಾಲಿನಲ್ಲಿ ಒಟ್ಟು 171 ಕೋಟಿ ರೂ.ಗಳ ವಹಿವಾಟು ನಡೆಸುವುದರ ಮೂಲಕ 43.55.130 ನಿವ್ವಳ ಲಾಭ ಗಳಿಸಿ ಎ. ಶ್ರೇಣಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಸದಸ್ಯರಿಗೆ ಈ ವರ್ಷ ಶೇ.14 ಡಿವಿಡೆಂಟ್ ನೀಡಲಾಗುವುದು. ಸಂಘದಲ್ಲಿ ನಿರಖು ಠೇವಣಿದಾರರಿಗೆ ಶೇ.7.50 ಹಿರಿಯ ನಾಗರಿಕರಿಗೆ ಶೇ 8.00 ಹಾಗೂ ಹಿರಿಯ ನಾಗರಿಕರಲ್ಲಿ ಮಾಜಿ ಸೈನಿಕರಿಗೆ ಶೇ.8.01 ಹೆಚ್ಚುವರಿ ಬಡ್ಡಿ ನೀಡಲಾಗುವುದು ಎಂದು ತಿಳಿಸಿದರು.
ಸದಸ್ಯರ ಅನುಕೂಲಕ್ಕಾಗಿ ಆಧುನಿಕ ಅಕ್ಕಿ ಗಿರಣಿ, ಟ್ರಾಕ್ಟರ್ , ರಾಸಾಯನಿಕ ಗೊಬ್ಬರ, ಕೀಟನಾಶಕ ,ಕೃಷಿ ಉಪಕರಣಗಳನ್ನು ಮಾರಾಟ ಮಾಡಲಾಗುತ್ತಿದೆ. ಅದರೊಂದಿಗೆ ಇ ಸ್ಟಾಂಪ್, ಮೋದಿ ಕೇರ್ ಗೃಹಉಪಯೋಗಿ ವಸ್ತುಗಳ ಮಾರಾಟ ಮತ್ತು ಜೆರಾಕ್ಷ್ ಸೇರಿದಂತೆ ಇನ್ನಿತರ ಸೌಲಭ್ಯವನ್ನೂ ಒದಗಿಸಲಾಗಿದೆ ಎಂದರು.
ಸಂಘದ ವಾರ್ಷಿಕ ಮಹಾಸಭೆಯು ಆ.26 ರಂದು ಶನಿವಾರ ಬೆಳಿಗ್ಗೆ 10.30 ಗಂಟೆಗೆ ನಾಪೋಕ್ಲು ಕೊಡವ ಸಮಾಜದಲ್ಲಿ ನಡೆಯಲಿದ್ದು, ಸದಸ್ಯರು ತಪ್ಪದೆ ಸಭೆಯಲ್ಲಿ ಪಾಲ್ಗೊಂಡು ಸಂಘದ ಶ್ರೇಯೋಭಿವೃದ್ಧಿಗೆ ಸಲಹೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಬಿದ್ದಾಟಂಡ ಜಿ.ರಾಧಾ, ನಿರ್ದೇಶಕರಾದ ಕೇಟೋಳಿರ ಎಸ್.ಹರೀಶ್ ಪೂವಯ್ಯ, ಎನ್.ಎಸ್. ಉದಯಶಂಕರ್ , ಅರೆಯಡ ಎಂ.ಅಶೋಕ್, ಪಾಡಿಯಮ್ಮಂಡ ಕೆ.ಮುರಳಿಧರ , ಹೆಚ್.ಎ.ಬೊಳ್ಳು, ಕೇಲೇಟಿರ ಜಿ. ಮುತ್ತಮ್ಮ , ಕುಂಡ್ಯೋಳoಡ ಎಂ.ಕವಿತಾ, ಚೀಯಕಪೂವಂಡ ಎನ್. ದೇವಯ್ಯ, ಚೋಕಿರ ಬಿ ಪೂವಪ್ಪ, ಕುಂದೈರಿರ ಸಿ ಕಿರಣ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಚಾಳಿಯಂಡ ಎ. ಪೂಣಚ್ಚ ಉಪಸ್ಥಿತರಿದ್ದರು.
ವರದಿ: ದುಗ್ಗಳ ಸದಾನಂದ.