ಮಡಿಕೇರಿ ಆ.23 : ಕೊಡವ ಕೂಟಾಳಿಯಡ ಕೂಟದ ಮಾಹಸಭೆ ಹಾಗೂ ಆಡಳಿತ ಮಂಡಳಿಯ ಚುನಾವಣೆ ನಾಪೋಕ್ಲುವಿನ ಪುನಶ್ಚೇತನ ಚೇತನ ಚಾರಿಟೇಬಲ್ ಟ್ರಸ್ಟ್ ಸಭಾಂಗಣದಲ್ಲಿ ಸಂಘಟನೆಯ ಸ್ಥಾಪಕ ಅಧ್ಯಕ್ಷ ಚಿಮ್ಮಚಿರ ಪವಿತ ರಜನ್ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಚಂಗುಲಂಡ ಸೂರಜ್ , ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ಉಪಾಧ್ಯಕ್ಷ ಕಾಂಗೀರ ಸಂತೋಷ್ ದೇವಯ್ಯ, ಸಹ ಕಾರ್ಯದರ್ಶಿ ನೂರೆರ ಸರಿತ ಅರುಣ್, ಖಜಾಂಚಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ನಿರ್ದೇಶಕರಾಗಿ ಬಾಳೆಯಡ ದಿವ್ಯ ಮಂದಪ್ಪ, ಅಮ್ಮಾಟಂಡ ಚೇತನ್, ಕರ್ತುರ ರನ್ನು ಪೆಮ್ಮಯ್ಯ, ಕಾಳಮಂಡ ರಾಬಿನ್, ಬೊಜ್ಜಂಗಡ ಚೆಂಗಪ್ಪ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಗೌರವ ಸಲಹೆಗಾರ ಚೊಟ್ಟಂಡ ಪ್ರಭು ಸೋಮಯ್ಯ , ಸದಸ್ಯರಾದ ಕೊಟ್ಟಂಗಡ ಕವಿತ ವಾಸುದೇವ ಮತ್ತಿತ್ತರರು ಉಪಸ್ಥಿತರಿದ್ದರು.
ಈ ಸಂದರ್ಭ ಪುನಶ್ಚೇತನ ಚಾರಿಟೇಬಲ್ ಟ್ರಸ್ಟ್ ನ ವಿಶೇಷ ಮಕ್ಕಳಿಗೆ ಕೂಟದ ವತಿಯಿಂದ ಉಡುಗೊರೆ ನೀಡಲಾಯಿತು.