ನಾಪೋಕ್ಲು ಆ.25 : ನಾಪೋಕ್ಲು ಲಯನ್ಸ್ ಸಂಸ್ಥೆ, ಪೊನ್ನಾಡ್ ಉತ್ಪಾದಕರ ಸಂಘ, ಕೊಡವ ಸಮಾಜ, ಈಶ ಫೌಂಡೇಶನ್ ಸoಯುಕ್ತಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮವನ್ನು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಕನ್ನಂಬಿರ ಸುಧಿ ತಿಮ್ಮಯ್ಯ ಹಾಗೂ ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲೆಟಿರ ಅಜಿತ್ ನಾಣಯ್ಯ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಈಶ ಫೌಂಡೇಶನ್ ನ ಸೇವಾ ಸಂಯೋಜಕ ಮಂಜುನಾಥ್ ಆರಾಧ್ಯ, ಮಾತನಾಡಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳುವುದರ ಮೂಲಕ ಗ್ರಾಮೀಣ ಜನರ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಂಸ್ಥೆ ಶ್ರಮಿಸುತ್ತಿದೆ ಎಂದ ಅವರು ಈಶ ಫೌಂಡೇಶನ್ ನ ಮೂಲಕ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಇದರ ಸದ್ಬಳಕೆಯನ್ನು ಎಲ್ಲರೂ ಪಡೆದುಕೊಂಡು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಇ.ಸಿ.ಜಿ, ಮದುಮೇಹ, ಪಾದ ಸ್ಪರ್ಶ, ಬಿ.ಪಿ ಪರೀಕ್ಷೆ ಮಾಡಲಾಯಿತು. 90 ಮಂದಿ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಮೂಳೆ ತಜ್ಙ ಡಾ.ಕಾರ್ತಿಕ್ ಅಯ್ಯಣ್ಣ, ಲಯನ್ಸ್ ಸೇವಾ ಕಾರ್ಯಕರ್ತ ಮುಕ್ಕಾಟಿರ ವಿನಯ್, ಕಾರ್ಯದರ್ಶಿ ಮಾದೆಯಂಡ ಕುಟ್ಟಪ್ಪ, ಕೋಟೆರ ಡಾ.ಪಂಚಮ್ ತಿಮ್ಮಯ್ಯ, ಕೇಟೋಳಿರ ರತ್ನಾ ಚರ್ಮಣ, ಬೊಪ್ಪೆರ ಜಯ, ಬಿದ್ದಪ್ಪ, ಪುಷ್ಪ ಸತೀಶ್, ವಿಶು ಪೂವಯ್ಯ ,ಉಮೇಶ್, ಪೊನ್ನಾಡ್ ಉತ್ಪಾದಕರ ಸಂಘದ ಪೊನ್ನಪ್ಪ, ಕೃತಿಕಾ, ಪವಿತ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ