ಮಡಿಕೇರಿ ಆ.26 : ಶ್ರಾವಣ ಮಾಸದ ಮೊದಲ ಹಬ್ಬವಾದ ವರಮಹಾಲಕ್ಷ್ಮಿ ಹಬ್ಬವನ್ನು ಜಿಲ್ಲೆಯಾದ್ಯಂತ ಮಹಿಳೆಯರು ಮನೆಯಲ್ಲಿಯೇ ಸಂಭ್ರಮದಿಂದ ಆಚರಿಸಿದರು.
ಮುಂಜಾನೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು. ಮಹಿಳೆಯರು ತಮ್ಮ ಮನೆ ಮುಂದೆ ರಂಗೋಲಿ ಹಾಕಿ, ತಳಿರು ತೋರಣ ಕಟ್ಟಿ ಅಲಂಕರಿಸಿದ್ದರು. ವಿವಿಧ ಬಗೆಯ ಹೂವುಗಳಿಂದ ಮಂಟಪ ಮಾಡಿ, ಹೂವಿನ ಹಾರ, ಬೆಳ್ಳಿ-ಬಂಗಾರದ ಆಭರಣಗಳಿಂದ ವರಮಹಾಲಕ್ಷ್ಮಿಯನ್ನು ಸಿಂಗಾರ ಮಾಡಿ ಪ್ರತಿಷ್ಟಾಪಿಸಿದರು. ನಂತರ ದೇವಿಯ ಮೂರ್ತಿಗೆ ಸೀರೆ ಉಡಿಸಿ ಬೆಳ್ಳಿ, ಬಂಗಾರದ ಆಭರಣ ಹಾಕಿ ವೈಭವದಿಂದ ಪೂಜೆ ನೆರೆವೇರಿಸಿದರು.








