ಮಡಿಕೇರಿ ಆ.27 : ಸಂಘದ ಸದಸ್ಯರಲ್ಲದ ವ್ಯಕ್ತಿಗಳಿಗೆ ಆಟೋ ಚಲಾಯಿಸಲು ಅವಕಾಶ ನೀಡುವುದಿಲ್ಲ ಎಂದು ಆಟೋ ಮಾಲೀಕ, ಚಾಲಕರ ಸಂಘ ಮತ್ತು ಕೊಡಗು ರಕ್ಷಣಾ ವೇದಿಕೆಯ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ನೀಡಿರುವ ಹೇಳಿಕೆ ಚಾಲಕರ ಜೀವನದ ಹಕ್ಕಿಗೆ ವಿರುದ್ಧವಾಗಿದೆ ಎಂದು ಮಡಿಕೇರಿ ನಗರದ ಜಾಗೃತ ಆಟೋ ಚಾಲಕರ ಬಳಗದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಳಗದ ಸದಸ್ಯರಾದ ಎಂ.ಬಿ.ದುರ್ಗೆಶ್, ವೇಣು, ಹರ್ಷಿತ್, ಪ್ರಸಾದ್ ಸೇರಿದಂತೆ 30ಕ್ಕೂ ಹೆಚ್ಚು ಆಟೋ ಚಾಲಕರು ಆಟೋ ಮಾಲೀಕ, ಚಾಲಕರ ಸಂಘ ಹಾಗೂ ಸಂಚಾರಿ ಠಾಣಾಧಿಕಾರಿ ಶ್ರೀಧರ್ ಅವರಿಗೆ ಮನವಿ ಸಲ್ಲಿಸಿ ಈ ಕುರಿತು ಚರ್ಚಿಸಿದರು.
ಸಂಘದ ಸದಸ್ಯತ್ವ ಖಡ್ಡಾಯವಾಗಿ ಪಡೆದಿರಬೇಕು ಎಂದು ಪೊಲೀಸ್ ಇಲಾಖೆ ಅಥವಾ ಸಾರಿಗೆ ಇಲಾಖೆ ನಿರ್ಣಯ ಮಾಡಿದರೆ ನಾವು ಒಪ್ಪುತ್ತೇವೆ. ಆದರೆ ಸಂಘದ ಪದಾಧಿಕಾರಿಗಳು ಕಾನೂನಿಗೆ ವಿರುದ್ಧವಾಗಿ ನಿಯಮ ರೂಪಿಸಿದರೆ ಕಾನೂನು ಸಮರ ನಡೆಸುತ್ತೇವೆ ಎಂದು ಸದಸ್ಯರು ಹೇಳಿದರು.
ಈಗಾಗಲೇ ಚಾಲಕರು ಅಧಿಕೃತ ಚಾಲನಾ ಪರವಾನಗಿ, ವಾಹನಗಳ ದಾಖಲಾತಿ ಹೊಂದಿಕೊಂಡು ಪೊಲೀಸ್ ಇಲಾಖೆಯಲ್ಲಿ ಎಂ.ಟಿ ಸಂಖ್ಯೆ ಪಡೆದು ವಾಹನ ಚಲಾಯಿಸುತ್ತಿದ್ದಾರೆ. ಎಂ.ಟಿ ಸಂಖ್ಯೆ ಸುರಕ್ಷಿತ ಮಾರ್ಗವಾಗಿದ್ದು, ಈ ಸಂಖ್ಯೆಯನ್ನು ತಿಂಗಳಿಗೊಂದು ಬಾರಿ ಪರೀಕ್ಷೆ ಮಾಡಬಹುದಾಗಿದೆ. ಸದಸ್ಯತ್ವವನ್ನು ನೆಪ ಮಾಡಿಕೊಂಡು ಚಾಲಕರ ವಿರುದ್ಧ ಹಗೆ ಸಾಧನೆ, ವಿನಾಕಾರಣ ಕಿರುಕುಳ ಮತ್ತು ಬ್ಲಾಕ್‌ಮೇಲ್ ಮಾಡುವುದು ಸರಿಯಲ್ಲ. ಗುಂಪುಗಾರಿಕೆ ಮತ್ತು ರಾಜಕೀಯ ಕಾರಣಕ್ಕಾಗಿ ಆಟೋ ಚಾಲಕರಿಗೆ ತೊಂದರೆಯಾದರೆ ಅದಕ್ಕೆ ಆಟೋ ಮಾಲೀಕ, ಚಾಲಕರ ಸಂಘವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Breaking News
- *ರಾಜ್ಯ ಸರ್ಕಾರದ ವಿರುದ್ಧ ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ : “ವಕ್ಫ್ ಕಾಯ್ದೆ” ಹಿಂಪಡೆಯಲು ಒತ್ತಾಯ : ಪ್ರತಾಪ್ ಸಿಂಹ ವಾಗ್ಧಾಳಿ*
- *ಶಾಲಾ ಮಕ್ಕಳ ಮನವಿಗೆ ಸ್ಪಂದಿಸಿದ ಶಾಸಕ ಡಾ.ಮಂತರ್ ಗೌಡ*
- *ಕನ್ನಡ ರಾಜ್ಯೋತ್ಸವ : ನ.23 ರಂದು ಮಡಿಕೇರಿಯಲ್ಲಿ ರಸಪ್ರಶ್ನೆ ಮತ್ತು ಗೀತಗಾಯನ ಕಾರ್ಯಕ್ರಮ*
- *ಗಂಗಮ್ಮ ನಿಧನ : ಶಾಸಕ ಪೊನ್ನಣ್ಣ ಸಂತಾಪ*
- *ಕೊಡಗು : ಡಿ.1 ರಿಂದ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರಕ್ರಿಯೆ ಆರಂಭ : ಜಿಲ್ಲಾಧಿಕಾರಿ ವೆಂಕಟ್ ರಾಜಾ*
- *ಪಡಿತರ ಚೀಟಿ ಪರಿಷ್ಕರಣೆ : ಅರ್ಹ ಬಿಪಿಎಲ್ ಕಾರ್ಡ್ ರದ್ದುಗೊಳಿಸುವುದಿಲ್ಲ : ಸಚಿವ ಮುನಿಯಪ್ಪ*
- *ಕೊಡಗು ಬ್ಲಡ್ ಡೋನಸ್೯ ಸಂಸ್ಥೆಯ 7ನೇ ವಾಷಿ೯ಕೋತ್ಸವ : ಜೀವ ಉಳಿಸುವ ರಕ್ತದಾನಿಗಳೇ ನಿಜವಾದ ಹೀರೋಗಳು : ಅನಿಲ್ ಹೆಚ್.ಟಿ.*
- *ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಚುನಾವಣೆ : ಜಾನ್ಸನ್ ಪಿಂಟೋ ಸೇರಿ ಹಲವರು ಕಣದಲ್ಲಿ*
- *ಕಲ್ಲು ಬಾಯ್ಸ್ ಲೈಕ್ಸ್ ಫ್ಯಾಶನ್ ಫುಟ್ಬಾಲ್ ಕಪ್ : ನಿಯೋನ್ ಎಫ್.ಸಿ ಅಮ್ಮತ್ತಿ ಚಾಂಪಿಯನ್*
- *ಗ್ರಾ.ಪಂ ಉಪಚುನಾವಣೆ : ಕೊಡಗಿನ ವಿವಿಧೆಡೆ ಮದ್ಯ ಮಾರಾಟ ನಿಷೇಧ*