ನಾಪೋಕ್ಲು ಆ.28 : ಎಸ್ ಎಸ್ ಕಲಾ ಸಂಗಮದ ವತಿಯಿಂದ ಮೈಸೂರಿನಲ್ಲಿ ನಡೆದ
ಮಿಸ್, ಮಿಸೆಸ್ ಅಂಡ್ ಕಿಡ್ಸ್ ಸೀಸನ್ ಫೋರ್ ಕಾರ್ಯಕ್ರಮದಲ್ಲಿ ಕೊಡಗಿನ ಕೋಕೇರಿ ಗ್ರಾಮದ ಬಿದ್ದಂಡ ಸುರಕ್ಷಿತ ಮಿಸ್ ಮೈಸೂರ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಸುರಕ್ಷಿತ ಕೋಕೇರಿ ಗ್ರಾಮದ ನಿವೃತ ದೈಹಿಕ ಶಿಕ್ಷಕ ಬಿದ್ದಂಡ ರಾಜ ಉತ್ತಪ್ಪ ಹಾಗೂ ಸಿಂತಿಯ ಉತ್ತಪ್ಪ ಪುತ್ರಿ.
ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 60ಕ್ಕೂ ಅಧಿಕ ಸ್ವರ್ದಿಗಳು ಭಾಗವಹಿಸಿದ್ದರು.
ಮಿಸ್ ಮೈಸೂರ್ ಫ್ಯಾಶನ್ ಕಾರ್ಯಕ್ರಮದಲ್ಲಿ 20 ಸ್ವರ್ದಿಗಳ ಪೈಕಿ ಸುರಕ್ಷಿತ ಟ್ರೇಡಿಷನಲ್ ಮತ್ತು ವೆಸ್ಟೆರ್ನ್ ನಲ್ಲಿ ಕೊಡವ ಸೀರೆ ಧರಿಸಿ ಕೂರ್ಗ್ ಕೊಡವತಿ ಆಗಿ ಭಾಗವಹಿಸಿದ್ದರು.
ಇವರು ಮೈಸೂರ್ ಮಹಾರಾಜ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಸಿಎ ವ್ಯಾಸಂಗ ಮಾಡುತ್ತಿದ್ದಾರೆ. ಕಾರ್ಯಕ್ರಮದ ತೀರ್ಪುಗಾರರಾಗಿ ಸತ್ಯವತಿ ಬಸವರಾಜ್,ಭುವನ ಸುಂದರಿ, 2022 ವಿನ್ನರ್ ಜ್ಯೋತಿ ಬಿಹಲ್, ಖ್ಯಾತ ಡಿಸೈನರ್ ವರ್ಷ, ಮಿಸಸ್ ಇಂಡಿಯಾ ವಿನ್ನರ್ ಸುಪ್ರಜಾ, ಪೂರ್ಣಿಮಾ, ಗಂಡಸಿ ಸದಾನಂದ ಸ್ವಾಮಿ ಸಂಪಾದಕರು ಹಾಗೂ ಚಲನ ಚಿತ್ರ ನಟರು, ನಿರ್ಮಾಪಕರು ಮತಿತ್ತರರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ