ಮಡಿಕೇರಿ ಆ.28 : ಕಾಡು ಪ್ರಾಣಿಯನ್ನು ಬೇಟೆಯಾಡಿದ ಪ್ರಕರಣವನ್ನು ಬೇಧಿಸಿರುವ ಸೋಮವಾರಪೇಟೆ ಅರಣ್ಯ ಅಧಿಕಾರಿಗಳು ಕೋವಿ ಸಹಿತ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿಯ ಹಿನ್ನೆಲೆ ಸೋಮವಾರಪೇಟೆ ವಲಯದ ಬಾಣವಾರ ಚಿಕ್ಕಅಳುವಾರ ಗ್ರಾಮದ ನಿವಾಸಿ ಎ.ಕೆ.ಸುಂದರ ಎಂಬಾತನ ಮನೆ ಮೇಲೆ ದಾಳಿ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಮೂರವರೆ ಕೆ.ಜಿ ಮಾಂಸ ಮತ್ತು ಕೋವಿಯನ್ನು ವಶಕ್ಕೆ ಪಡೆದರು. ಆರೋಪಿ ಸುಂದರ ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯ ಚುರುಕುಗೊಂಡಿದೆ.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿಗಳಾದ ಹೆಚ್.ಪಿ.ಚೇತನ್, ಬಾಣಾವರ ಶಾಖೆಯ ಉಪ ವಲಯ ಅರಣ್ಯಾಧಕಾರಿ ಹೆಚ್.ಎಂ.ರಾಕೇಶ್, ಗಸ್ತು ಅರಣ್ಯ ಪಾಲಕರಾದ ಎ.ಎಸ್.ಪ್ರಸಾದ್ ಕುಮಾರ್, ಸದಾನಂದ ಹಿಪ್ಪರಗಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.









