ಮಡಿಕೇರಿ ಆ.28 : ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬಾಳೆಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾವಳಿ ನಡೆಯಿತು.
ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯಾವಳಿಯನ್ನು ವಿಜಯಲಕ್ಷ್ಮಿ ವಿದ್ಯಾಸಂಸ್ಥೆಯ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಉದ್ಘಾಟಸಿ ಮಾತನಾಡಿದರು.
ಹಿಂದೆ ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರಿಗೆ ಮಾತ್ರ ಹೆಚ್ಚು ಮನ್ನಣೆ ಮತ್ತು ಜನಪ್ರಿಯತೆ ಸಿಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಫ್ರೋ ಕಬ್ಬಡಿ, ಖೋ.ಖೋ, ವಾಲಿಬಾಲ್, ಹಾಕಿ ಪಂದ್ಯಾವಳಿಗಳು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತಿದ್ದು, ವಿದ್ಯಾರ್ಥಿಗಳು ಈ ಕ್ರೀಡೆಗಳತ್ತ ಗಮನ ಹರಿಸಿ ಭವಿಷ್ಯ ರೂಪಿಸಿಕೊಳ್ಳಲು ಕರೆ ನೀಡಿದರಲ್ಲದೆ. ಜಿಲ್ಲಾ ಮತ್ತು ರಾಜ್ಯ ಹಂತದ ಪಂದ್ಯದಲ್ಲಿಯೂ ನಮ್ಮ ತಾಲೂಕು ತಂಡಗಳೇ ವಿಜಯಿಯಾಗಿ ಬರಲಿಯೆಂದು ಶುಭಹಾರೈಸಿದರು .
ನಂತರ ಆರು ವಲಯಗಳ ಬಾಲಕ ಬಾಲಕಿಯರ 28 ತಂಡಗಳಿಗೆ ಎರಡು ಅಂಕಣದಲ್ಲಿ ಪಂದ್ಯಗಳು ನಡೆದವು.
ಪ್ರೌಢ ಶಾಲಾ ಬಾಲಕರ ವಿಭಾಗದ ವಾಲಿಬಾಲ್ ಪಂದ್ಯದಲ್ಲಿ ಬಾಳೆಲೆ ಹೋಬಳಿಯ ವಿಜಯಲಕ್ಷ್ಮಿ ಪ್ರೌಢ ಶಾಲೆ ಪ್ರಥಮ, ಶ್ರೀಮಂಗಲ ಹೋಬಳಿಯ ಜೆ.ಸಿ ಪ್ರೌಢ ಶಾಲೆ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಅಮ್ಮತ್ತಿ ವಲಯದ ಸರ್ಕಾರಿ ಪ್ರೌಢಶಾಲೆ ಚನ್ನಯನಕೋಟೆ ಪ್ರಥಮ, ಪೊನ್ನಂಪೇಟೆ ವಲಯದ ಸರ್ವದೈವತ ಪ್ರೌಢಶಾಲೆ ದ್ವಿತೀಯ , ಪ್ರಾಥಮಿಕ ಶಾಲಾ ಬಾಲಕರಲ್ಲಿ ಪೊನ್ನಂಪೇಟೆ ವಲಯದ ಸರ್ವದೈವತಾ ಪ್ರಾಥಮಿಕ ಶಾಲೆ ಪ್ರಥಮ, ವಿರಾಜಪೇಟೆ ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಟೋಳಿ ದ್ವಿತೀಯ, ಬಾಲಕಿಯರಲ್ಲಿ ಪೊನ್ನಂಪೇಟೆ ವಲಯದ ಸರ್ವದೈವತಾ ಪ್ರಾಥಮಿಕ ಶಾಲೆ ಪ್ರಥಮ, ಬಾಳೆಲೆ ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾನೂರು ದ್ವಿತೀಯ ಸ್ಥಾನ ಪಡೆದುಕೊಂಡರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷರಾದ ಗಾಯತ್ರಿ, ವಿಜಯಲಕ್ಷ್ಮಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಚಂದ್ರಶೇಖರ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ.ಆರ್. ಸುಬ್ಬಯ್ಯ, ಉಪಾಧ್ಯಕ್ಷ ಯಂ.ಟಿ.ತಮ್ಮಯ್ಯ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎ.ಪ್ರವೀಣ್, ಕಾರ್ಯದರ್ಶಿ ಪ್ರಭು ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ಸತ್ಯ, ಕವಿತಾ ಕಾವೇರಮ್ಮ, ಸಿ.ಸುಬ್ಬಯ್ಯ ಚೌವ್ಹಾಣ್, ಮಹೇಶ್ ಹಾಜರಿದ್ದರು.
ಪಂದ್ಯಾವಳಿಯ ವೀಕ್ಷಕ ವಿವರಣೆಯನ್ನು ಶಿಕ್ಷಕರಾದ ರಾಘವೇಂದ್ರ ಮತ್ತು ತಿಮ್ಮರಾಜು ನೀಡಿದರು.








