ಮಡಿಕೇರಿ ಆ.29 : ಚೀನಾದ ಹ್ಯಾಂಗ್‍ಝೌನಲ್ಲಿ ಸೆ.23 ರಿಂದ ನಡೆಯಲಿರುವ ಏಷ್ಯನ್‍ಗೇಮ್ಸ್‍ನ ಭಾರತ ಬಾಕ್ಸಿಂಗ್ ತಂಡದ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳನ್ನು ಒಳಗೊಂಡ ತಂಡಕ್ಕೆ ಮುಖ್ಯ ಕೋಚ್ ಆಗಿ ಕೊಡಗಿನ ಚೇನಂಡ ಸಿ.ಕುಟ್ಟಪ್ಪ (ವಿಶು) ಅವರನ್ನು ನೇಮಕ ಮಾಡಲಾಗಿದೆ.
ಕೊಡಗಿನ ಆರು ಕ್ರೀಡಾಪಟುಗಳಾದ ಅಶ್ವಿನಿ ಪೊನ್ನಪ್ಪ, ಜೋಶ್ನಾ ಚಿಣ್ಣಪ್ಪ, ರೋಹನ್ ಬೋಪಣ್ಣ, ಅಪ್ಪಚಂಗಡ ಬೆಳ್ಯಪ್ಪ, ಕೇಳಪಂಡ ಗಣಪತಿ, ತೀತರಮಾಡ ಸಿಂಚಲ್ ಕಾವೇರಮ್ಮ ಹಾಗೂ ಇವರೊಂದಿಗೆ ಕುಟ್ಟಪ್ಪ ಅವರೂ ಸೇರಿ ಕೊಡಗಿನಿಂದ ಒಟ್ಟು ಏಳು ಮಂದಿ ಪಾಲ್ಗೊಳ್ಳಲಿದ್ದಾರೆ.








