ಕಡಂಗ ಆ.29 : ಎಸ್‍ಎಸ್‍ಎಫ್ ಐವತ್ತನೇ ವಾರ್ಷಿಕೋತ್ಸವ “ಗೋಲ್ಡನ್ ಫಿಫ್ಟಿ” ಮಹಾ ಸಮ್ಮೇಳನ ಸೆ.10 ರಂದು ಬೆಂಗಳೂರಿನ ಪ್ಯಾಲೆಸ್ ಮೈದಾನದಲ್ಲಿ ಐತಿಹಾಸಿಕವಾಗಿ ನಡೆಯಲಿದ್ದು, ಅದರ ಪ್ರಚಾರಾರ್ಥ ಕೊಡಗು ಜಿಲ್ಲೆಯ ಪ್ರತಿಷ್ಠಿತ ಸಮನ್ವಯ ವಿದ್ಯಾ ಸಂಸ್ಥೆ ಅನ್ವಾರುಲ್ ಹುದಾದಲ್ಲಿ ಉಚಿತ ಯುನಾನಿ ವೈದ್ಯಕೀಯ ಶಿಬಿರ ಹಾಗೂ ಸುನ್ನತ್ ಹಿಜಾಮ ನಡೆಯಿತು.
ಡಾ. ಸುಹೈಲ್ ಹಾಗೂ ತಂಡ ವೈದ್ಯಕೀಯ ತಪಾಸಣೆ ನಡೆಯಿತು. ಸುಮಾರು 200 ಕ್ಕಿಂತಲೂ ಹೆಚ್ಚು ಮಂದಿ ಶಿಬಿರವನ್ನು ಸದುಪಯೋಗ ಪಡಿಸಿಕೊಂಡರು.
ರಾಷ್ಟ್ರೀಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, ಜುನೈದ್ ಅನ್ವಾರಿ, ಸತ್ತಾರ್ ರಝ್ವಿ, ವಿರಾಜಪೇಟೆ ಸೆಕ್ಟರ್ ನಾಯಕರಾದ ತನ್ವೀರ್ ಅನ್ವಾರಿ, ಇಲ್ಯಾಸ್ ಅನ್ವಾರಿ, ತ್ವಾಹಿರ್ ಅನ್ವಾರಿ, ಜಂಶೀರ್ ಅನ್ವಾರಿ ಹಾಜರಿದ್ದರು.
ವರದಿ : ನೌಫಲ್ ಕಡಂಗ