ಮಡಿಕೇರಿ ಆ.29 : ಸಮಸ್ತ ಕೊಡಗು ಜಿಲ್ಲಾ ಜಂಞಯ್ಯತುಲ್ ಉಲಮಾದ ವತಿಯಿಂದ ಸಿದ್ದಾಪುರದಲ್ಲಿ ಆತ್ಮೀಯ ಸಂಗಮ ಹಾಗೂ ಮಳೆಗಾಗಿ ಪ್ರತ್ಯೇಕ ಪ್ರಾರ್ಥನೆ ನಡೆಯಿತು.
ಸಿದ್ದಾಪುರದ ವರಕ್ಕಲ್ ಸ್ಮಾರಕ ಸೌಧದಲ್ಲಿ ನಡೆದ ಕಾರ್ಯಕ್ರಮನ್ನು ಸಮಸ್ತ ಕೇರಳ ಜಂಯಿಯ್ಯತುಲ್ ಉಲಮಾದ ಕೇಂದ್ರ ಸದಸ್ಯ ಎಂ.ಅಬ್ದುಲ್ಲ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರವಾದಿ ಸ.ಅ ತೋರಿಸಿದ ಮಾದರಿ ಜೀವನವನ್ನು ಮೈಗೂಡಿಸಿಕೊಂಡು ಸಮುದಾಯಕ್ಕೆ ಅರಿವು ಮೂಡಿಸಬೇಕಾಗಿದೆ ಎಂದು ಕರೆ ನೀಡಿದರು.
ಕೇಂದ್ರ ತರಬೇತುದಾರ ಮುಹಮ್ಮದ್ ಫೈಝಿ ರಬೀಅ ಸಂದೇಶವನ್ನು ಹೇಳಿ, ಜನತೆ ಪ್ರವಾದಿ ಸ.ಅ ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕೊಡಗಿನ ಸಮಸ್ತ ಚಾಲಕ ಶಕ್ತಿ ಎಂ.ಅಬ್ದುಲ್ ರಹಮಾನ್ ಮುಸ್ಲಿಯಾರ್, ವಿದ್ಯಾರ್ಥಿಗಳಿಗೆ ಸಮಸ್ತ ಸಂಘಟಿಸುವ ಮುಸಾಬಖಾ ಕಲಾ ಸಾಹಿತ್ಯ ಸ್ಪರ್ಧೆಯ ಅನಿವಾರ್ಯತೆ ಮತ್ತು ಅದರ ರೂಪುರೇಷೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಕೆ.ಪಿ.ಅಬೂಬಕ್ಕರ್ ಮೌಲವಿ, ಎಂ.ತಮ್ಲೀಖ್ ದಾರಿಮಿ, ಬಶೀರ್, ಹಸನಿ, ಹನೀಫ್, ರಝಾಕ್ ಫೈಝಿ, ಸೂಫಿ ದಾರಿಮಿ, ನೌಫಲ್ ಹುದವಿ ಮುಂತಾದ ಗಣ್ಯರು ಹಾಜರಿದ್ದರು. ಎಸ್‍ಕೆಜೆಎಂಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಎಂ.ಆರಿಫ್ ಫೈಝಿ ಸ್ವಾಗತಿಸಿದರು.
ಕಾರ್ಯಕ್ರಮದ ನಂತರ ಮೌಲಿದ್ ಪಾರಾಯಣ ನಡೆಸಿ, ಮಳೆಗಾಗಿ ಪ್ರತ್ಯೇಕ ಪ್ರಾರ್ಥನೆ ನಡೆಸಲಾಯಿತು.