ನಾಪೋಕ್ಲು ಆ.30 : ಪಾಡಿ ಇಗ್ಗುತ್ತಪ್ಪ ದೇವರ ಕೃಪೆಯಿಂದ ಉತ್ತಮ ಮಳೆಯಾಗಿ ಜನರಿಗೆ ನೆಮ್ಮದಿ ದೊರಕುವಂತಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಆಶಯ ವ್ಯಕ್ತಪಡಿಸಿದರು.
ಕಕ್ಕಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ.ಈ ಭಾಗದ ಜನರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ಬಾಚಮಂಡ ಲವ ಚಿಣ್ಣಪ್ಪ, ಕಲ್ಯಾ ತಂಡ ಮುತ್ತಪ್ಪ, ಬಾಚಮಂಡ ಪೂವಣ್ಣ, ಪಾಂಡoಡ ನರೇಶ್, ನಿಡುಮಂಡ ಸುಬ್ರಮಣಿ, ಕಲಿಯಂಡ ಸಂಪನ್ ಅಯ್ಯಪ್ಪ, ಕಣಿಯರ ನಾಣಯ್ಯ, ಪೊoಗೇರೆ ಉಲ್ಲಾಸ್, ಕಂದಾಯ ಪರಿವೀಕ್ಷಕ ರವಿಕುಮಾರ್, ಪಾರುತ್ತೆಗಾರ ಪರದಂಡ ಪ್ರಿನ್ಸ್ ತಮ್ಮಯ್ಯ ಇನ್ನಿತರರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ