ಮಡಿಕೇರಿ ಆ.31 : ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್. ಬೋಸರಾಜು ಅವರನ್ನು ಭೇಟಿ ಮಾಡಲಾಯಿತು.
ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ನೇತೃತ್ವದಲ್ಲಿ ಭೇಟಿಯಾದ ಸಂಸ್ಥೆಯ ಪ್ರಮುಖರು, ವಿವಿಧ ಭೇಡಿಕೆಗಳ ಕುರಿತು ಗಮನ ಸೆಳೆದರು. ಜಿ.ಪಂ , ಗ್ರಾ.ಪಂ ಹಾಗೂ ಪ.ಪಂ ಗಳಿಂದ ಸರಕಾರದ ಆದೇಶ ದಂತೆ ಅನುದಾನ ನೀಡುವಂತೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಸಚಿವರು, ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿ ಜಿಲ್ಲಾ ಸಂಸ್ಥೆಗೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಅಲ್ಲದೆ ಸಂಸ್ಥೆಯ ಎಲ್ಲಾ ವಿಷಯಗಳಿಗೆ ಸಹಕರಿಸುವ ಭರವಸೆ ನೀಡಿದರು.
ಜಿಲ್ಲಾ ಗೈಡ್ ಆಯುಕ್ತರಾದ ರಾಣಿ ಮಾಚಯ್ಯ, ಸಹ ಕಾರ್ಯದರ್ಶಿ ಬೊಳ್ಳಜಿರ ಬಿ. ಅಯ್ಯಪ್ಪ ಹಾಜರಿದ್ದರು.