ಬೆಂಗಳೂರು ಸೆ.1 : ಚಂದ್ರಯಾನ-3ರ ಯಶಸ್ಸಿನ ಹುಮ್ಮಸ್ಸಿನಲ್ಲಿರುವ ಇಸ್ರೋ ತಂಡ ಇದೀಗ ಸೂರ್ಯನ ಮೇಲೆ ಅಧ್ಯಯನ ನಡೆಸಲು ಸಜ್ಜಾಗಿದೆ. ಸೆ.2 ಶನಿವಾರದಂದು ಆದಿತ್ಯ ಎಲ್ 1 ಮಿಷನ್ ಉಡಾವಣೆಯಾಗುತ್ತಿದೆೆ.
ಇದರ ಯಶಸ್ಸಿಗಾಗಿ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರು ಇಂದು ತಿರುಪತಿಯ ಸುಳ್ಳೂರುಪೇಟೆಯ ಶ್ರೀಚೆಂಗಾಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ವಿಶೇಷ ಪೂಜೆ ಸಲ್ಲಿಸಿ ಆದಿತ್ಯ ಎಲ್ 1 ಯಶಸ್ಸಿಗಾಗಿ ಪ್ರಾರ್ಥಿಸಿದರು.
ಶನಿವಾರ ಬೆಳಗ್ಗೆ 11:50ಕ್ಕೆ “ಆದಿತ್ಯ ಎಲ್ 1” ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿoದ ಉಡಾವಣೆಯಾಗಲಿದೆ. ಈ ಕಾರ್ಯಾಚರಣೆ ಗಮ್ಯ ಸ್ಥಾನವನ್ನು ತಲುಪಲು 125 ದಿನಗಳನ್ನು ತೆಗೆದುಕೊಳ್ಳಲಿದೆ. ಬಳಿಕ ಸೂರ್ಯನ ಮೇಲೆ ಅಧ್ಯಯನ ನಡೆಸಲಿದೆ ಎಂದು ಎಸ್.ಸೋಮನಾಥ್ ತಿಳಿಸಿದ್ದಾರೆ.










