ಮಡಿಕೇರಿ ಸೆ.2 : ಕೇಂದ್ರ ಸರ್ಕಾರವು 2018-19 ನೇ ಸಾಲಿನ ಬಜೆಟ್‍ನ ಕಿಸಾನ್ ಕ್ರೇಡಿಟ್ ಕಾರ್ಡ್ ಸೌಲಭ್ಯವನ್ನು ಮೀನುಗಾರಿಕೆ ಚಟುವಟಿಕೆ ಹಾಗೂ ಮೀನು ಕೃಷಿಕರಿಗೆ ವಿಸ್ತರಣೆ ಮಾಡಿ ಘೋಷಿಸಿದೆ.
ಈ ಯೋಜನೆಯಡಿ ಮೀನು ಕೃಷಿಕರು ಅಲ್ಪಾವದಿ ಸಾಲವನ್ನು ಬ್ಯಾಂಕ್‍ಗಳ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಪಡೆಯಬಹುದಾಗಿದೆ. ಈಗಾಗಲೇ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಂಡಿರುವ ರೈತರು ಮೀನುಗಾರಿಕೆ ಚಟುವಟಿಕೆಗಳಿಗೂ ಬ್ಯಾಂಕ್‍ಗಳಿಂದ ಅಲ್ಪಾವದಿ ಸಾಲವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿ ಹಾಗೂ ಸಾಲದ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿ ಸೆಪ್ಟೆಂಬರ್, 15 ರೊಳಗೆ ಸಂಬಂಧಪಟ್ಟ ತಾಲ್ಲೂಕು ಮೀನುಗಾರಿಕೆ ಇಲಾಖೆಗೆ ಸಲ್ಲಿಸುವಂತೆ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.








