ನಾಪೋಕ್ಲು ಸೆ.2 : ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ರೂ.39.92 ಲಕ್ಷ ನಿವ್ವಳ ಲಾಭಗಳಿಸಿ ಉತ್ತಮ ಶ್ರೇಣಿಯಲ್ಲಿದೆ ಎಂದು ಸಂಘದ ಅಧ್ಯಕ್ಷ ಮಾಳೆಯಂಡ ಎಂ.ಅಪ್ಪಚ್ಚ ತಿಳಿಸಿದರು.
ಸಂಘದ ಸಂಭಾ0ಗಣದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಒಟ್ಟು 1,137 ಸದಸ್ಯರಿದ್ದಾರೆ. ಸಂಘದಲ್ಲಿ ಪಾಲು ಬಂಢವಾಳ 1.50 ಕೋಟಿ ರೂ. ಇದೆ. ಸದಸ್ಯರು 3.58 ಕೋಟಿ ರೂ ಗಳನ್ನು ಠೇವಣಿ ಇರಿಸಿದ್ದು ಸದಸ್ಯರಿಗೆ ಕೆ.ಸಿ.ಸಿ.ಸಾಲ ರೂ. 10.48 ಕೋಟಿ ರೂಗಳನ್ನು ಸಾಲ ವಿತರಣೆ ಮಾಡಲಾಗಿದೆ. ಹಾಗೂ ಜಾಮಿನು ಸಾಲ ಹಾಗೂ ಗೊಬ್ಬರ ಸಾಲ 94.62 ಲಕ್ಷ ಸಾಲ ವಿತರಣೆ ಮಾಡಲಾಗಿದೆ. ಸಂಘವು ಪ್ರಸಕ್ತ 2022-23 ಸಾಲಿನಲ್ಲಿ ಉತಮ್ಮ ವಹಿವಾಟು ನಡೆಸುವುದರ ಮೂಲಕ 39.92 ಲಕ್ಷ ನಿವ್ವಳ ಲಾಭಗಳಿಸಿ ಉತಮ್ಮ ಶ್ರೇಣಿಯಲ್ಲಿದೆ ಎಂದು ಮಾಹಿತಿ ನೀಡಿದರು. ಸದಸ್ಯರಿಗೆ ಈ ವರ್ಷ ಶೇ.15 ಡಿವಿಡೆಂಡ್ ನೀಡಲಾಗುವುದು. ಸಂಘದಲ್ಲಿ ನಿರುಖು ಠೇವಣಿದಾರರಿಗೆ ಶೆ. 7.50 ಹಿರಿಯಾ ನಾಗರಿಕರಿಗೆ 8.00 ಬಡ್ಡಿ ನೀಡಲಾಗುವುದು ಎಂದು ತಿಳಿಸಿದ್ದರು. ಸದಸ್ಯರ ಅನುಕೂಲಕ್ಕಾಗಿ ರಾಸಾಯನಿಕ ಗೊಬ್ಬರ, ಹತ್ಯಾರು ವಸ್ತುಗಳ ಮಾರಾಟ ಸಾಲಭ್ಯವನ್ನು ಒದಗಿಸಲಾಗಿದೆ.
ವಾರ್ಷಿಕ ಮಹಾಸಭೆ : ಸಂಘದ ವಾರ್ಷಿಕ ಮಹಾಸಭೆಯ ಸೆ.9 ರಂದು ಬೆಳಿಗ್ಗೆ 10.30 ಗಂಟೆಗೆ ಸ0ಘದ ಕಟ್ಟಡದಲ್ಲಿ ನಡೆಯಲ್ಲಿದ್ದು, ಸದಸ್ಯರು ತಪ್ಪದೆ ಸಭೇಯಲ್ಲಿ ಪಾಲ್ಗೋಡು ಸಂಘದ ಶ್ರೇಯೋಭಿವೃದ್ಧಿಗೆ ಸಲಹೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂಘಧ ಉಪಾದ್ಯಕ್ಷೆ ಕೈಬುಲೀರ ಸಿ.ಯಶೋದ, ನಿರ್ದೇಶಕರಾದ ಚೀಯಕ್ಪೂವಂಡ.ಎ0.ಅಪ್ಪಚ್ಚು,ಮಣವಟ್ಟೀರ.ಎ0. ಚಂಗಪ್ಪ, ಬದಂಜೇಟ್ಟಿರ .ಎ.ತಿಮ್ಮಯ್ಯ, ಮಣವಟ್ಟೀರ.ಎನ್.ಕುಶಾಲಪ್ಪ, ಎಂ.ಜಿ.ಸುರೇಶ್, ತೆಕ್ಕಡ.ಬಿ.ಪೊನ್ನಪ್ಪ, ಚೀಯಕ್ಪೂವಂಡ.ವಿ.ರೀನಾ, ಚೋಕೀರ.ಯು.ಬೀಮಯ್ಯ, ಐ.ಜಿ. ಟಿಂಶ, ಪಿ.ಬಿ.ಬೆಳ್ಳಿಯಪ್ಪ, ಪ್ರಭಾರ ಮುಖ್ಯಕಾರ್ಯನಿರ್ವಹಣದಿಕಾರಿಗಳದ ಕೆ.ಎಸ್.ಅನಿಲ್ ಕುಮಾರ್ ರವರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ