ಮಡಿಕೇರಿ ಸೆ.2 : ಮಡಿಕೇರಿಯ ಇಂದಿರಾನಗರದ ಮನೆಯೊಂದರಲ್ಲಿ ಸೇರಿಕೊಂಡಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ತಜ್ಞ ಯದುಕುಮಾರ್ ರಕ್ಷಿಸಿದ್ದಾರೆ. ಇಂದಿರಾ ನಗರದ ಹೆಚ್.ಟಿ.ಶಿವಪ್ಪ ಎಂಬವರ ಮನೆಯ ದೇವರ ಕೋಣೆಯಲ್ಲಿ ಸೇರಿಕೊಂಡಿದ್ದ 13 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ತಜ್ಞ ಯದುಕುಮಾರ್ ಸುರಕ್ಷಿತವಾಗಿ ಸೆರೆ ಹಿಡಿದು, ಮದೆನಾಡು ದೇವರ ಕಾಡಿಗೆ ಬಿಟ್ಟರು. ಯದುಕುಮಾರ್ ವಿವಿಧ ಜಾತಿಯ ಹಾವುಗಳನ್ನು ರಕ್ಷಿಸಿದ್ದು, ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.









