ಮಡಿಕೇರಿ ಸೆ.2 : ಕೊಡಗು ಜಿಲ್ಲಾ ಮಡಿಕೇರಿ ನಗರ ವ್ಯಾಪ್ತಿಯ ಎಲ್ಲಾ ಆಹಾರ ವಸ್ತುಗಳ/ ಪದಾರ್ಥಗಳ ಉತ್ಪಾದಕರು, ಪ್ಯಾಕರ್ಗಳು, ಸಾಗಣಿದಾರರು, ಸಗಟು/ ಚಿಲ್ಲರೆ ಮಾರಾಟಗಾರರು, ವಿತರಕರು, ಹೋಟೆಲ್ ರೆಸಾರ್ಟ್, ಕ್ಯಾಂಟೀನ್, ಸಂಚಾರಿ ಸಿದ್ಧಪಡಿಸಿದ ಆಹಾರ ಮಾರಾಟಗಾರರು, ವೈನ್ಸ್ಟೋರ್, ಕ್ಲಬ್ಗಳು, ಬಾರ್ ಅಂಡ್ ರೆಸ್ಟೋರೆಂಟ್ಗಳು, ಹೋಮ್ಸ್ಟೇ ಗಳು, ಬೇಕರಿ, ಸಿಹಿತಿಂಡಿ, ಹಾಲು, ಹಾಲಿನ ಉತ್ಪನ್ನ, ಪ್ಯಾಕೇಜ್ಡ್ ಕುಡಿಯುವ ನೀರು ಘಟಕ/ ಮಾರಾಟಗಾರರು, ಹಣ್ಣು, ತರಕಾರಿಗಳು, ಕೋಳಿ, ಮೀನು, ಮಾಂಸ ಮಾರಾಟ, ರಸ್ತೆ ಬದಿ ಆಹಾರ ಪದಾರ್ಥ ಮಾರಾಟ, ಉಗ್ರಾಣಗಳು, ಸಂಸ್ಕರಣ ಘಟಕಗಳು, ಹಾಗೂ ಎಲ್ಲಾ ರೀತಿಯ ಆಹಾರ ಪದಾರ್ಥ ವಹಿವಾಟುದಾರರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ತರಬೇತಿ ಕಾರ್ಯಾಗಾರವು ನಗರದ ಗಾಂಧಿ ಭವನದಲ್ಲಿ ನಡೆಯಿತು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತಾಧಿಕಾರಿ ಡಾ.ಅನಿಲ್ ಧಾವನ್ ಅವರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಚೇಂಬರ್ ಆಫ್ ಕಾಮರ್ಸ್ ಸಹಕಾರದಲ್ಲಿ ನಡೆದ ಕಾರ್ಯಾಗಾರದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಬಗ್ಗೆ ಹಲವು ಮಾಹಿತಿ ನೀಡಲಾಯಿತು.
ತರಬೇತಿಯಲ್ಲಿ 52 ಆಹಾರ ಉದ್ದಿಮೆದಾರರು ಭಾಗವಹಿಸಿದ್ದರು, ಮಡಿಕೇರಿ ಅಧ್ಯಕ್ಷರಾದ ಧನಂಜಯ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಯಶ್ವಂತ, ಹಿರಿಯ ಆಹಾರ ಸುರಕ್ಷತಾಧಿಕಾರಿ ಮಂಜುನಾಥ್ ಇದ್ದರು.
ಇದೇ ರೀತಿ ಕುಶಾಲನಗರದ, ಬಿಜಿಟಿ ಹಾಲ್ನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಕುಶಾಲನಗರದಲ್ಲಿ ತರಬೇತಿಯಲ್ಲಿ 42 ಆಹಾರ ಉದ್ದಿಮೆದಾರರು ಭಾಗವಹಿಸಿದ್ದರು.
ಆಹಾರ ತಯಾರು ಮಾಡುವವರು ದೈಹಿಕ ಶುಚಿತ್ವ ಹೊಂದಿರಬೇಕು. ಆರೋಗ್ಯದ ಕಡೆ ವಿಶೇಷ ಕಾಳಜಿ ಹೊಂದಿರಬೇಕು. ಅಡುಗೆ ತಯಾರು ಮಾಡುವ ಸ್ಥಳ ಪರಿಸರ ನೈರ್ಮಲ್ಯವಾಗಿರಬೇಕು. ಆಹಾರದ ಕಚ್ಚಾ ವಸ್ತುಗಳನ್ನು ಸೂಕ್ತವಾಗಿ ಸಂಗ್ರಹಿಸಿ ಶುದ್ದೀಕರಿಸಿ ಉಪಯೋಗಿಸಬೇಕು. ಆಹಾರ ತಯಾರಿಕೆಗೆ ಶುದ್ದವಾದ ನೀರು ಬಳಸಬೇಕು. ತಯಾರಿಸಿದ ಆಹಾರ ಕಲುಷಿತವಾಗದಂತೆ ಎಚ್ಚರವಹಿಸಬೇಕು. ಕ್ರಿಮಿಕೀಟಗಳು ಆಹಾರಕ್ಕೆ ಬೀಳದಂತೆ ಜಾಗೃತಿ ವಹಿಸಬೇಕು.
ಪೋಷಕಾಂಶ ನಾಶವಾಗದ ರೀತಿಯಲ್ಲಿ ಆಹಾರವನ್ನು ತಯಾರಿಸಬೇಕು. ತಯಾರಿಸಿದ ಆಹಾರವನ್ನು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಉಪಯೋಗಿಸಬೇಕು. ಪ್ಯಾಕ್ ಮಾಡಿದ ಆಹಾರ ವಸ್ತುಗಳ ಲೇಬಲ್ಗಳಲ್ಲಿ ಗ್ರಾಹಕರಿಗೆ ಅಗತ್ಯವಾಗಿ ನೀಡಲೇಬೇಕಾದ ಮಾಹಿತಿ ಇರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತಾಧಿಕಾರಿ ಡಾ.ಅನಿಲ್ ಧಾವನ್ ಮಾಹಿತಿ ನೀಡಿದರು.
Breaking News
- *ಲಾರಿ ಡಿಕ್ಕಿಯಾಗಿ ಬಾಲಕಿ ಸಾವು*
- *ಅದವಿಯಾಗೆ ಅಭಿನಂದನೆ*
- *ನಿಧನ ಸುದ್ದಿ*
- *ಇವಿಎಂ ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ಸುಪ್ರೀಂ ಕೋರ್ಟಲ್ಲಿ ವಜಾ*
- *ಕಾರಾಗೃಹ ವಾರ್ಡನ್ ಹುದ್ದೆಗೆ ಆಹ್ವಾನ*
- *ವೀರ ಸೇನಾನಿಗಳಿಗೆ ಅಗೌರವ : ಕುಲಾಲ ಕುಂಬಾರ ಸಂಘ ಖಂಡನೆ*
- *ಡಿ.1 ರಂದು ಜಿಲ್ಲಾ ಮಟ್ಟದ ಕ್ರಿಸ್ಮಸ್ ಕರೋಲ್ ಗಾಯನ ಸ್ಪರ್ಧೆ*
- *ಆರೋಪಿಯ ಗಡಿಪಾರಿಗೆ ಹಿಂದು ಜಾಗರಣ ವೇದಿಕೆ ಒತ್ತಾಯ*
- *ಸೋಮವಾರಪೇಟೆ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಿವಿಧ ಸ್ಪರ್ಧಾ ಕಾರ್ಯಕ್ರಮ*
- *ಸೋಮವಾರಪೇಟೆ : ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ : ಹಿರಿಯ ಸಿವಿಲ್ ನ್ಯಾಯಾಧೀಶ ಗೋಪಾಲಕೃಷ್ಣ*