ಬೆಂಗಳೂರು ಸೆ.3 : ಪತ್ರಿಕಾ ಛಾಯಾಗ್ರಾಹಕ ಎಸ್.ಆರ್ .ಮಧುಸೂದನ್ ರವರಿಗೆ ದೆಹಲಿಯ ವೈಲ್ಡ್ ಲೈಫ್ ಫೋಟೋಗ್ರಾಫಿ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಲಾದ ಸ್ಯಾಮ್ ಇಂಟರ್ನ್ಯಾಷನಲ್ ಸರ್ಕ್ಯೂಟ್ ನಲ್ಲಿ 11 ಪದಕ ಗಳಿಸಿದ್ದಾರೆ. ವಿವಿಧ ಇಂಟರ್ನ್ಯಾಷನಲ್ ಫೋಟೋಗ್ರಾಫಿ ಸರ್ಕ್ಯೂಟ್ ಗಳಲ್ಲಿ ವನ್ಯಜೀವಿ, ಫೋಟೋ ಜನರಿಸಂ ಹಾಗೂ ಟ್ರಾವೆಲ್ ಫೋಟೋಗ್ರಾಫಿ ವಿಭಾಗಗಳಲ್ಲಿ ನಾಲ್ಕು( PSA) ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕ ಗೋಲ್ಡ್ ಮೆಡಲ್ ಎಂಟು ವಿವಿಧ ಚಿನ್ನದ ಪದಕ ಸೇರಿದಂತೆ ಒಟ್ಟಾರೆಯಾಗಿ 23 ಪದಕಗಳು ಲಭಿಸಿದೆ. ಇದುವರೆಗೆ 2023 ರ ಜನವರಿ ಇಂದ ಅಗಸ್ಟ್ ವರೆಗೆ ನಡೆದ ವಿವಿಧ ಫೋಟೋಗ್ರಫಿ ಸ್ಪರ್ಧೆಯಲ್ಲಿ ಎಂಟು ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕ ಚಿನ್ನದ ಪದಕ ಸೇರಿದಂತೆ 32 ವಿವಿಧ ಚಿನ್ನದ ಪದಕಗಳು ಲಭಿಸಿದೆ, ಬೆಳ್ಳಿ ಮತ್ತು ಕಂಚಿನ ಪದಕ ಸೇರಿದಂತೆ ಒಟ್ಟಾರೆಯಾಗಿ 86 ವಿವಿಧ ಪದಕಗಳು ಲಭಿಸಿವೆ.











