ಮಡಿಕೇರಿ ಸೆ.4 : ಉಡುಪಿಯ ಮಹಾತ್ಮಾ ಗಾಂಧಿ ಕ್ರೀಡಾಂಗದಲ್ಲಿ ನಡೆದ 13ನೇ ಆವೃತ್ತಿಯ ಕರ್ನಾಟಕ ರಾಜ್ಯ ಕಿವುಡರ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ತಂಡ 3ನೇ ಸ್ಥಾನ ಪಡೆದಿದೆ.
ತಂಡದ ನಾಯಕರಾಗಿ ಎಂ.ಎ.ರಮ್‍ಶದ್ ಕಾರ್ಯನಿರ್ವಹಿಸಿದ್ದು, ಎಮ್.ಎನ್.ನದೀರ್, ಹೆಚ್.ಡಿ.ಗಣೇಶ್, ಎಸ್.ಟಿ.ಸುನಿಲ್, ನಾಗೇಶ, ಪಿ.ಎಲ್.ದೀರಜ್, ಎ.ಆರ್.ರಮನ್ ಕುಮಾರ್ ಹಾಗೂ ಪಿ.ಜೆ.ಅಭಿಷೇಕ್ ತಂಡದಲ್ಲಿ ಪಾಲ್ಗೊಂಡಿದ್ದರು ಎಂದು ಕೊಡಗು ಜಿಲ್ಲಾ ಕಿವುಡರ ಸಂಘದ ಉಪಾಧ್ಯಕ್ಷರಾದ ಶ್ರೀ ಶಂಕರ ನಾರಾಯಣ ಹೆಬ್ಬಾರ್ ಅವರು ತಿಳಿಸಿದ್ದಾರೆ.
ಕ್ರೀಡಾಕೂಟದಲ್ಲಿ ರಾಜ್ಯಾದ್ಯಂತದಿಂದ ಒಟ್ಟು 18 ತಂಡಗಳು ಭಾಗವಹಿಸಿದ್ದರು.









