ಮಡಿಕೇರಿ ಸೆ.4 : ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಮಡಿಕೇರಿ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಮಡಿಕೇರಿ, ಜಿಲ್ಲಾ ಯುವ ಒಕ್ಕೂಟ ಕೊಡಗು ಜಿಲ್ಲೆ, ಮಡಿಕೇರಿ ತಾಲೂಕು ಯುವ ಒಕ್ಕೂಟದ ಸಂಯುಕ್ತಶ್ರಯದಲ್ಲಿ ಹಾಕತ್ತೂರು ತೊಂಭತ್ತುಮನೆ ತ್ರಿನೇತ್ರ ಯುವಕ ಸಂಘದ ವತಿಯಿಂದ ಗ್ರಾಮೀಣ ಕ್ರೀಡಾಕೂಟ ನಡೆಯಿತು.
ತೊಂಭತ್ತುಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಂಜೆ ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ತೊಂಭತ್ತುಮನೆ ತ್ರಿನೇತ್ರ ಯುವಕ ಸಂಘದ ಅಧ್ಯಕ್ಷ ಪಿ.ಪಿ.ಸುಕುಮಾರ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.
ಮುಖ್ಯ ಅತಿಥಿಗಳಾಗಿ ಹಾಕತ್ತೂರು ಗ್ರಾ.ಪಂ ಅಧ್ಯಕ್ಷ ಬಿ.ಕೆ.ಯತೀಶ್, ಸದಸ್ಯರಾದ ಹೆಚ್.ಟಿ.ಕಿರಣ, ಶೈನಿ, ತೊಂಭತ್ತುಮನೆ ಶಾಲಾಭಿವೃದ್ಧಿ ಹಾಗೂ ಮೇಲಸ್ತುವಾರಿ ಸಮಿತಿ ಅಧ್ಯಕ್ಷ ಕೆ.ವೈ.ಜಲೀಲ್, ತೊಂಭತ್ತುಮನೆ ತ್ರೀನೇತ್ರ ಯುವಕ ಸಂಘದ ಸಲಹೆಗಾರ ಎ.ಕೆ.ನಾಗೇಶ್ ನಾಯ್ಡ್, ಕ್ರೀಡಾಕೂಟದ ಅನ್ನದಾನಿ ಬಿ.ಎ.ಮೊಹಮ್ಮದ್ ಅಲಿ, ಮಡಿಕೇರಿ ತುಳುವೆರ ಜನಪದ ಕೂಟದ ಸಂಚಾಲಕ ಬಿ.ಎನ್.ಪ್ರಸಾದ್, ಪತ್ರಕರ್ತ ಕಿಶೋರ್ ರೈ, ಮೀನು ಗಾರಿಕೆ ಇಲಾಖೆಯ ನಿವೃತ್ತ ಸಿಬ್ಬಂದಿ ಟಿ.ಕೆ.ಮಾಧವ, ದಾನಿಗಳಾದ ಧನುಕುಮಾರ್, ಚಿನ್ನಮ್ಮ, ಹಾಗೂ ಉಳುವಾರನ ಅನಿಲ್, ಮೇಚಿರ ಹರೀಶ್ ಹಾಜರಿದ್ದರು.
ಸ್ಥಾಪಕಾಧ್ಯಕ್ಷ ದಿವಾಕರ್ ಸ್ವಾಗತಿಸಿದರು. ಕಾರ್ಯದರ್ಶಿ ಅಬುಬಕ್ಕರ್ ನಿರೂಪಿಸಿ, ವಂದಿಸಿದರು.
ಸಹ ಕಾರ್ಯದರ್ಶಿ ಪಿ.ಆರ್.ರಂಜಿತ್, ಸಾಂಸ್ಕೃತಿಕ ಕಾರ್ಯದರ್ಶಿ ಎಂ.ಕೆ.ರಾಜ ಹಾಗೂ ಯುವಕ ಸಂಘದ ಸದಸ್ಯರು ಹಾಜರಿದ್ದರು.
ಕ್ರೀಡಾಕೂಟವನ್ನು ಸದಸ್ಯರುಗಳಾದ ಬಿ.ಬಿ.ರಮೇಶ್, ಬಿ.ಕೆ.ವಿಠಲ, ಪಿ.ಇ.ದೇವಿ ಪ್ರಸಾದ್, ಟಿ.ಬಿ.ಮಂಜುನಾಥ್, ಪಿ.ಆರ್.ರಂಜಿತ್, ಕೆ.ಎಂ.ಖಾಸಿಂ, ಸಿ.ವಿ.ಸುನೀಲ್ ನಡೆಸಿಕೊಟ್ಟರು.
:: ವಿಜೇತರ ವಿವರ :: ಎಲ್‍ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳಿಗೆ ನಡೆದ ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ಲಿವಿನ್ ಮೋಹನ್ ಪ್ರಥಮ, ದಿವಿನ್ ಸುನಿಲ್ ದ್ವಿತೀಯ, ಸಾಮ್ರಾಟ್ ಹರೀಶ್ ರೈ ತೃತೀಯ ಬಹುಮಾನವನ್ನು ಪಡೆದುಕೊಂಡರು.
1 ರಿಂದ 3ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ವಿಷದ ಚೆಂಡು ಸ್ಪರ್ಧೆಯಲ್ಲಿ ಭುವನ್ ರಂಜನ್ ಪ್ರಥಮ, ರಾಬಿನ್ ಜಾನ್ ದ್ವಿತೀಯ, ಮಾನ್ವಿಕ ರಮೇಶ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
4ನೇ ತರಗತಿಯಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ 100 ಮೀ. ಓಟದ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಫಹಾದ್ ಪ್ರಥಮ, ಫಹೀಮ್ ದ್ವಿತೀಯ, ಹಫೀಝ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕಿರ ವಿಭಾಗದಲ್ಲಿ ಶಮ್ನಾ ಪ್ರಥಮ, ಜಾಗೃತಿ ದ್ವಿತೀಯ, ಇಶಾನ ತೃತೀಯ ಸ್ಥಾನ ಪಡೆದುಕೊಂಡರು.
6ನೇ ತರಗತಿಯಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ 200 ಮೀ. ಓಟದ ಸ್ಪರ್ಧೆಯ ವಿದ್ಯಾರ್ಥಿನಿಯರ ವಿಭಾಗದಲ್ಲಿ ಸಹನಾ ಪ್ರಥಮ, ನೌಫೀರಾ ದ್ವಿತೀಯ, ಶರಣ್ಯ ತೃತೀಯ ಸ್ಥಾನ ಪಡೆದುಕೊಂಡರು.
ಬಾಲಕರ ವಿಭಾಗದಲ್ಲಿ ಅಫ್ಸಲ್ ಪ್ರಥಮ, ಕೃತನ್ ದ್ವಿತೀಯ, ಹಾಷಿರ್ ತೃತೀಯ ಬಹುಮಾನ ಗೆದ್ದುಕೊಂಡಿದ್ದಾರೆ.
8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ 200 ಮೀ ಓಟದ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ರಕ್ಷಿತಾ ಪ್ರಥಮ, ಅಫ್ರೀನಾ ದ್ವಿತೀಯ, ಜನ್ಮಿತಾ ತೃತೀಯ, ಬಾಲಕರ ವಿಭಾಗದಲ್ಲಿ ಸಚಿನ್ ಪ್ರಥಮ, ಅಫ್ರೀದ್ ದ್ವಿತೀಯ, ಹಫೀಝ್ ತೃತೀಯ ಬಹುಮಾನ ಗೆದ್ದುಕೊಂಡಿದ್ದಾರೆ.
ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಡೆದ 300 ಮೀ. ಓಟದ ಸ್ಪರ್ಧೆಯಲ್ಲಿ ಬಾಲಕಿಯರ ವಿಭಾಗದಲ್ಲಿ ರಕ್ಷಿತಾ ಪ್ರಥಮ, ಮೌಲ್ಯ ದ್ವಿತೀಯ, ನಿಹಾರಿಕ ತೃತೀಯ ಸ್ಥಾನ ಪಡೆದುಕೊಂಡಿದ್ದು, ಬಾಲಕರ ವಿಭಾಗದಲ್ಲಿ ವಿನ್ಯಾಸ್ ಪ್ರಥಮ, ಸಾದಾತ್ ದ್ವಿತೀಯ, ಯಕ್ಷಿತ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸಾರ್ವಜನಿಕ ಮಹಿಳೆಯರ ಸೂಜಿ ನೂಲಿನ ಓಟದ ಸ್ಪರ್ಧೆಯಲ್ಲಿ ಭವ್ಯ ಪ್ರಥಮ, ಹುಸೈರಾ ದ್ವಿತೀಯ, ಸೌಮ್ಯ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸಾರ್ವನಿಕ ಪುರುಷರ ಗೋಣಿಚೀಲದ ಓಟದ ಸ್ಪರ್ಧೆಯಲ್ಲಿ ಸೈನು ಪ್ರಥಮ, ದಯಾನಂದ ದ್ವಿತೀಯ, ಸಾದಾತ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಸಾರ್ವಜನಿಕ ಮಹಿಳೆಯರ ಲಿಂಬೆ ಚಮಚ ಓಟದ ಸ್ಪರ್ಧೆಯಲ್ಲಿ ಪ್ರಮೀಳಾ ಪ್ರಥಮ, ಸಹನಾ ದ್ವಿತೀಯ, ಸೌಮ್ಯ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಸಾರ್ವಜನಿಕ ಪರುಷರ ಬಸ್ಸಾಟ ಸ್ಪರ್ಧೆಯಲ್ಲಿ ಹರೀಶ್ ರೈ ಪ್ರಥಮ, ಕವನ್ ದ್ವಿತೀಯ, ಕಿಶೋರ್ ತೃತೀಯ, ಮಹಿಳೆಯರ ವಿಭಾಗದಲ್ಲಿ ತೃಪ್ತಿ ಪ್ರಥಮ, ಅಸ್ಮಾ ದ್ವಿತೀಯ, ಪೂವಮ್ಮ ತೃತೀಯ ಬಹುಮಾನ ಗೆದ್ದುಕೊಂಡಿದ್ದಾರೆ.
ಸಾರ್ವಜನಿಕ ಪುರುಷರ ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಪವನ್ ಪ್ರಥಮ, ರಾಜೇಶ್ ದ್ವಿತೀಯ, ಮಹಮ್ಮದ್ ಅಲಿ ತೃತೀಯ ಬಹುಮಾನ ಪಡೆದುಕೊಂಡಿದ್ದು, ಸಾರ್ವಜನಿಕ ದಂಪತಿ ಓಟದ ಸ್ಪರ್ಧೆಯಲ್ಲಿ ಧನುಕುಮಾರ್-ಸಜನಿ ದಂಪತಿ ಪ್ರಥಮ, ಶರೀಫ್-ಹುಸೈರಾ ದಂಪತಿ ದ್ವಿತೀಯ, ದೇವಿ ಪ್ರಸಾದ್-ದಿವ್ಯ ದಂಪತಿ ತೃತೀಯ ಬಹುಮಾನ ಪಡೆದುಕೊಂಡರು.
ಸಾರ್ವಜನಿಕ ಪುರುಷರ ರಸ್ತೆ ಓಟದ ಸ್ಪರ್ಧೆಯಲ್ಲಿ ಧನುಕುಮಾರ್ ಪ್ರಥಮ, ಇಸ್ಮಾಯಿಲ್ ದ್ವಿತೀಯ, ನವೀನ್ ತೃತೀಯ, ಮಹಿಳೆಯ ವಿಭಾಗದಲ್ಲಿ ಸೌಮ್ಯ ಚೂರಿಕಾಡು ಪ್ರಥಮ, ಗೀತಾ ದ್ವಿತೀಯ, ಪ್ರಮೀಳಾ ಸುರೇಶ್ ತೃತೀಯ ಬಹುಮಾನ ಪಡೆದುಕೊಂಡರು.
ಸಾರ್ವಜನಿಕ ಯುವಕರ ರಸ್ತೆ ಓಟದಲ್ಲಿ ಅನ್ಸರ್ ಪ್ರಥಮ, ವಿನ್ಯಾಸ್ ದ್ವಿತೀಯ, ಆಶಿಕ್ ತೃತೀಯ, ಯುವತಿಯರ ವಿಭಾಗದಲ್ಲಿ ರಕ್ಷಿತಾ ಪ್ರಥಮ, ಈಶ್ವರಿ ದ್ವಿತೀಯ, ಬಿ.ಆರ್.ರಕ್ಷಿತಾ ತೃತೀಯ ಹಾಗೂ ಸ್ವಾತಿಗೆ ನೆನಪಿನ ಕಾಣಿಕೆ ನೀಡಲಾಯಿತು.
ಸಾರ್ವಜನಿಕ ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಬಿ.ವೈ.ಸಿ ಚೂರಿಕಾಡು ಪ್ರಥಮ, ತೋಭತ್ತುಮನೆ ಗಲ್ರ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪುರುಷರ ವಿಭಾಗದಲ್ಲಿ ತೊಂಭತ್ತುಮನೆ ವಿನಾಯಕ ದೇವಾಲಯ ಸಮಿತಿ ಪ್ರಥಮ, ತೊಂಭತ್ತುಮನೆ ವಿಲೇಜ್ ಬಾಯ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿತು.









